ಆಗ್ರಾ, ಸೆ 08 (DaijiworldNews/PY): ಕೊರೊನಾ ಕಾರಣದಿಂದ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧಿಸಲಾಗಿದ್ದ ತಾಜ್ಮಹಲ್ ಹಾಗೂ ಆಗ್ರಾ ಕೋಟೆ ಆರು ತಿಂಗಳ ಬಳಿಕ ತೆರೆಯಲಾಗುತ್ತಿದ್ದು, ಸೆ.21ರಂದು ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿದೆ.
ಆಗ್ರಾ ಕೋಟೆಯೊಂದಿಗೆ ತಾಜ್ಮಹಲ್ ಅನ್ನು ಕೂಡಾ ಸೆ.21ರಂದು ತೆರೆಯಲಾಗುತ್ತದೆ. ಇದರೊಂದಿಗೆ ಕೇಂದ್ರ ಸರ್ಕಾರ ಹೊರಡಿಸಿರುವ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ತಾಜ್ಮಹಲ್ ಪ್ರವೇಶಕ್ಕೆ ಒಂದು ದಿನದಲ್ಲಿ 5000 ಪ್ರವಾಸಿಗರಿಗೆ ಮಾತ್ರ ಅವಕಾಶ ಹಾಗೂ 2,500 ಪ್ರವಾಸಿಗರಿಗೆ ಮಾತ್ರ ಆಗ್ರಾ ಕೋಟೆಗೆ ಪ್ರವೇಶ ಅವಕಾಶ ನೀಡಲಾಗುವುದು ಎಂದು ಆಗ್ರಾ ಜಿಲ್ಲಾಧಿಕಾರಿ ಪ್ರಭು ನಾರಾಯಣ್ ಸಿಂಗ್ ಸೋಮವಾರ ತಿಳಿಸಿದ್ದಾರೆ.
ಈ ನಡುವೆ ಸೆ.1ರಿಂದ ಆಗ್ರಾದ ಇತರ ಸ್ಮಾರಕಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.