ಎರ್ನಾಕುಲಂ, ಸೆ. 8(DaijiworldNews/HR): ಕೇರಳದ ಎರ್ನಾಕುಲಂ ಸಮುದ್ರದಲ್ಲಿ ಸಿಲುಕಿಕೊಂಡಿದ್ದ 24 ಜನ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಇತರರು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದು, ಇನ್ನು 31 ಮಂದಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಾಂಧರ್ಭಿಕ ಚಿತ್ರ
ಇನ್ನು ಹವಾಮಾನ ವೈಪರೀತ್ಯ ಕಾರಣ 14 ದೋಣಿಗಳಲ್ಲಿ ಕನಿಷ್ಠ 55 ಮೀನುಗಾರರು ಸಮುದ್ರದಲ್ಲಿ ಸಿಲುಕಿದ್ದರು ಎಂದು ಐಸಿಜಿ ಪ್ರಕಟಣೆಯಲ್ಲಿ ತಿಳಿಸದೆ.
ಹಡಗುಗಳು ಮತ್ತು ವಿಮಾನಗಳ ಮೂಲಕ ಕಾರ್ಯಾಚರಣೆ ನಡೆಸಿ, ಕೋಸ್ಟ್ ಗಾರ್ಡ್, ಸಹ ಮೀನುಗಾರರು, ಸಾಗರ ಜಾರಿ ವಿಭಾಗ ಮತ್ತು ಕರಾವಳಿ ಭದ್ರತಾ ಪೊಲೀಸರು 24 ಮೀಗಾರರನ್ನು ರಕ್ಷಿಸಿ, ಇನ್ನುಳಿದ 31 ಮೀನುಗಾರರ ಹುಡುಕಾಟ ಪ್ರಗತಿಯಲ್ಲಿದೆ ಎಂದು ಐಸಿಜಿ ಹೇಳಿದೆ.
ಮೀನುಗಾರಿಕೆ ದೋಣಿಗಳು ಮಲಪ್ಪುರಂ, ಎರ್ನಾಕುಲಂ ಮತ್ತು ಅಲ್ಲಪುಳ ಜಿಲ್ಲೆಗಳ ಪೊನ್ನಾನಿ, ಕಾಯಂಕುಲಂ, ಮುನಂಬಂ ಮತ್ತು ಅಜಿಕೋಡ್ ಬಂದರಿನಿಂದ ಬಂದದ್ದಾಗಿದೆ ಎಂದು ಐಸಿಜಿ ತಿಳಿಸಿದೆ.