ನವದೆಹಲಿ, ಸೆ 08 (DaijiworldNews/PY): ವಾಸ್ತವಿಕ ನಿಯಂತ್ರಣ ರೇಖೆಯ ಪ್ರಸ್ತುತ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಉಭಯ ದೇಶಗಳ ನಡುವೆ ರಾಜಕೀಯ ಮಟ್ಟದಲ್ಲಿ ಮಾತುಕತೆ ಮಾಡಬೇಕಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಗಡಿ ವಿವಾದದ ಕಾರಣದಿಂದ ಭಾರತ ಹಾಗೂ ಚೀನಾದ ಸಂಬಂಧ ಹಾಳಾಗಬಾರದು. ಕಳೆದ 30 ವರ್ಷಗಳಿಂದ ಗಡಿಯಲ್ಲಿ ಶಾಂತಿ ಇತ್ತು. ಆದರೆ, ಈ ವಿಚಾರವನ್ನು ನಾನು ಕಡೆಗಳಿಸುತ್ತಿಲ್ಲ. ಎಂದು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಜೂನ್ 15ರಂದು ನಡೆದ ಸಂಘರ್ಷದಲ್ಲಿ ಸುಮಾರು 21 ಯೋಧರು ಹುತಾತ್ಮರಾಗಿದ್ದರು. ಆದರೆ, ಚೀನಾ ಸೇನೆಯ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ವಿಚಾರವನ್ನು ಚೀನಾ ಬಹಿರಂಗಪಡಿಸಿಲ್ಲ. ಇದಾದ ಬಳಿಕ ಉಭಯ ದೇಶಗಳ ನಡುವೆ ಪೂರ್ವ ಲಡಾಖ್ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಘರ್ಷಣೆಯಾಗುತ್ತಲೇ ಇದೆ.