ನವದೆಹಲಿ, ಸೆ 08 (DaijiworldNews/PY): ಐಎಂಎ ಕಂಪನಿ ಬಹುಕೋಟಿ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಬಿಐ ಇಬ್ಬರು ಸರ್ಕಾರಿ ಅಧಿಕಾರಿಗಳ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದೆ.
4000ಕೋಟಿ.ರೂ ಹಣಕಾಸಿ ಹಗರಣ ಪ್ರಕರಣದಲ್ಲಿ ಬೆಂಗಳೂರು ಉತ್ತರ ತಾಲೂಕು ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಹಾಗೂ ಮಾಜಿ ಗ್ರಾಮ ಲೆಕ್ಕಿಗ ಎನ್.ಮಂಜುನಾಥ್ ವಿರುದ್ದ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದೆ.
ಕ್ಲೀನ್ಚಿಟ್ ನೀಡುವ ಸಲುವಾಗಿ ಆರೋಪಿ ಐಎಂಎ ನಿರ್ದೇಶಕ ಮನ್ಸೂರ್ ಖಾನ್ನಿಂದ ನಾಗರಾಜ್ 4.5 ಕೋಟಿ.ರೂ.ಗಳನ್ನು ತೆಗೆದುಕೊಂಡಿದ್ದು, ಮಂಜುನಾಥ್ ಕೂಡಾ 10 ಲಕ್ಷ.ರೂ.ಗಳನ್ನು ತೆಗೆದುಕೊಂಡಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.