ಮುಂಬೈ, ಸೆ. 8(DaijiworldNews/HR): ಶಿವಸೇನೆಯ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರನ್ನು ಪಕ್ಷದ ಮುಖ್ಯ ವಕ್ತಾರರನ್ನಾಗಿ ನೇಮಕ ಮಾಡಿರುವುದಾಗಿ ಶಿವಸೇನಾ ಮಂಗಳವಾರ ತಿಳಿಸಿದೆ.
2014ರಲ್ಲಿ ಸಂಜಯ್ ರಾವತ್ ಮತ್ತಿತರನ್ನು ಕೈ ಬಿಟ್ಟು ಹೊಸಬರಿಗೆ ಮಣೆ ಹಾಕಲಾಗಿತ್ತು. ಅದಾಗಿ ಬಳಿಕ ವಿಧಾನಸಭಾ ಚುನಾವಣೆ ನಂತರ ಉಂಟಾಗಿದ್ದ ಬಿಕ್ಕಟ್ಟು, ಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ನನ್ನು ಒಟ್ಟಿಗೆ ಸೇರಿಸಿ ಮಹಾ ವಿಕಾಸ್ ಆಘಾಡಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವಲ್ಲಿ ಸಂಜಯ್ ರಾವತ್ ಮಹತ್ವದ ಪಾತ್ರ ವಹಿಸಿದ್ದರು.
ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಅರವಿಂದ್ ಸಾವಂತ್, ಎಂಪಿ ಪ್ರಿಯಾಂಕ ಚತುರ್ವೇದಿ, ನೀಲಮ್ ಗೊರೆ, ಮಹಾರಾಷ್ಟ್ರ ಸಚಿವರಾದ ಉದಯ್ ಸಾಮಂತ್, ಅನಿಲ್, ಗುಲಾಬ್ರಾವ್ ಪಾಟೀಲ್, ಶಾಸಕರಾದ ಸುನಿಲ್ ಪ್ರಭೂ ಮತ್ತು ಪ್ರತಾಪ್ ಸರ್ನಾಯಕ್, ಮುಂಬೈ ಮೇಯರ್ ಕಿಶೋರಿ ಪಡ್ನೇಕರ್ ಅವರನ್ನು ಅಧಿಕೃತ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಪಕ್ಷ ತಿಳಿಸಿದೆ.