ಬೆಂಗಳೂರು, ಸೆ 08 (DaijiworldNews/PY): ಕೊರೊನಾ ಹಿನ್ನೆಲೆ ನಾಡಹಬ್ಬ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಉನ್ನತ ಮಟ್ಟದ ಸಭೆಯ ಬಳಿಕ ಮಾತನಾಡಿದ ಅವರು, ಹಬ್ಬವನ್ನು ಸರಳವಾಗಿ ಆಚರಿಸಲಾಗುವುದು. ಆದರೆ, ಸಾಂಪ್ರದಾಯಿಕ ಆಚರಣೆಗಳನ್ನು ಕೈ ಬಿಡಲಾಗುವುದಿಲ್ಲ. ಹಾಗಾಗಿ ಸಾಂಕೇತಿಕ ಆಚರಣೆ ಮಾತ್ರ ಅವಕಾಶ ಎಂದು ತಿಳಿಸಿದರು.
ಇನ್ನು 10 ಕೋಟಿ. ರೂ.ಗಳನ್ನು ದಸರಾ ಆಚರಣೆ ಬಿಡುಗಡೆ ಮಾಡಲಾಗುವುದು. ಆದರೆ, ಆಹಾರ ಮೇಳ ಇಂತಹ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಅರಮನೆಯ ಹಾಗೂ ಚಾಮುಂಡಿ ಬೆಟ್ಟಕ್ಕೆ ಸೀಮಿತವಾಗಿ ದಸರಾ ನಡೆಯಲಿದೆ. ಇದರೊಂದಿಗೆ ಗಜಪಡೆಯನ್ನು ಕೂಡಾ 5ಕ್ಕೆ ಸೀಮಿತಗೊಳಿಸಬೇಕು. ಗಜಪಯಣವು ಅರಮನೆಯ ಆವರಣಕ್ಕೆ ಸೀಮಿತವಾಗಿ ನಡೆಯಲಿದೆ ಎಂದರು.
ಕೊರೊನಾ ನಿಯಂತ್ರಿಸುವಲ್ಲಿ ಶ್ರಮವಹಿಸಿದ ಕೊರೊನಾ ವಾರಿಯರ್ಸ್ಗಳಾದ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರಿಂದ ನಾಡದೇವತೆಯ ಅಗ್ರಪೂಜೆ ಹಾಗೂ ಉದ್ಘಾಟನೆಯನ್ನು ನೆರವೇರಿಸಲಾಗುವುದು ಎಂದು ತಿಳಿಸಿದರು.
ಗಜಪಡೆಗೆ 5-6 ಆನೆಗಳನ್ನು ಮಾತ್ರ ಬಳಸಬೇಕು, ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ಪೂಜೆ ನೆರವೇರಿಸಬೇಕು ಹಾಗೂ ಮೈಸೂರು ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವಂತೆ ಸಭೆಯಲ್ಲಿ ನಿರ್ಣಯ ಮಾಡಲಾಯಿತು.