ಮುಂಬೈ, ಸೆ 08 (DaijiworldNews/PY): ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಮುಂಬೈನ ಮಹಾನಗರ ಪಾಲಿಕೆ ನೋಟಿಸ್ ನೀಡಿದೆ.
ಕಂಗಾನ ಅವರಿಗೆ ನೊಟೀಸ್ ನೀಡಿರುವ ಮಹಾನಗರ ಪಾಲಿಕೆ ಮಣಿಕರ್ಣಿಕಾ ಕಚೇರಿ ಕೆಡವುವ ವಿಚಾರವಾಗಿ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಂಗಾನ, ಅಧಿಕಾರಿಗಳು ಬಲ್ಡೋಜರ್ನೊಂದಿಗೆ ಬಂದಿಲ್ಲ. ಬದಲಾಗಿ ನೋಟಿಸ್ ನೀಡಿದ್ದಾರೆ. ಸ್ನೇಹಿತರೇ ನಾನು ಅಪಾಯದಲ್ಲಿದ್ದೇನೆ. ಆದರೆ, ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲವಿದೆ ಎಂದು ಬರೆದುಕೊಂಡಿದ್ದಾರೆ.
ಕಂಗಾನ ಅವರಿಗೆ ಶಿವಸೇನಾ ನಾಯಕರ ಬೆದರಿಕೆ ಹಾಕಿದ್ದರ ನಡುವೆಯೂ ಅವರು ಮುಂಬೈಗೆ ಆಗಮಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕಂಗಾನ ಅವರಿಗೆ ಭದ್ರತೆ ನೀಡಿದ ಬೆನ್ನಲ್ಲೇ ಮುಂಬೈ ಮಹಾನಗರ ಪಾಲಿಕೆ ನೋಟಿಸ್ ನೀಡಿದೆ. ಕಂಗಾನ ಅವರು ತಮ್ಮ ನಿವಾಸವನ್ನು ನಿಯಮದ ವಿರುದ್ದ ನವೀಕರಣ ಮಾಡಿದ್ದು, ಈ ಹಿನ್ನೆಲೆ ಮಣಿಕರ್ಣಿಕಾ ಕಚೇರಿಯನ್ನು ಕೆಡವುವ ಬಗ್ಗೆ ನೋಟಿಸ್ ಜಾರಿ ಮಾಡಿದೆ.