ನವದೆಹಲಿ, ಸೆ 08 (DaijiworldNews/PY): ಟ್ವಿಟ್ಟರ್, ಗೂಗಲ್ ಇರುವ ಈ ಕಾಲದಲ್ಲಿ ಹೊಸ ಪೀಳಿಗೆಯವರು ಜ್ಞಾನಾರ್ಜನೆಗಾಗಿ ಪುಸ್ತಕ ಓದುವ ರೂಢಿಯನ್ನು ಮಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಜೈಪುರದಲ್ಲಿ ಪತ್ರಿಕಾ ಗೇಟ್' ಕಾರ್ಯಕ್ರಮವನ್ನು ವಿಡಿಯೊ ಕಾನ್ಫೆರೆನ್ಸ್ ಮೂಲಕ ಉದ್ಘಾಟಿಸಿ ಬಳಿಕ ರಾಜಸ್ಥಾನ್ ಪತ್ರಿಕಾ ಸಮೂಹದ ಅಧ್ಯಕ್ಷ ಕೊಠಾರಿ ಅವರ ಎರಡು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಹೊಸ ಪೀಳಿಗೆಯವರು ಪುಸ್ತಕ ಓದುವ ಅಭ್ಯಾಸ ಮಾಡುವುದು ಅಗತ್ಯ ಎಂದರು.
ಹಿಂದಿಗಿಂತಲೂ ವಿಶ್ವವೀಗ ಅಧಿಕ ಭಾರತದ ವಿದ್ಯಾಮಾನಗಳನ್ನು ಗಮನ ನೀಡುತ್ತಿದೆ. ಇದರೊಂದಿಗೆ ಭಾರತದ ಉತ್ಪನ್ನಗಳೊಂದಿಗೆ ಭಾರತದ ಧ್ವನಿಯೂ ಜಾಗತಿಕವಾಗುತ್ತಿರುವುದನ್ನು ಕಾಣಬಹುದು ಎಂದು ತಿಳಿಸಿದರು.
ಮಾಧ್ಯಮಗಳ ಕಾರ್ಯವನ್ನು ಹೊಗಳಿದ ಪ್ರಧಾನಿ ಮೋದಿ ಅವರು, ಕೊರೊನಾದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದೆ. ಇದೆಲ್ಲದರ ನಡುವೆ ಮಾಧ್ಯಮಗಳು ಕೆಲವೊಂದು ಬಾರಿ ಮಾಧ್ಯಮಗಳು ಟೀಕೆಗೆ ಒಳಪಡುತ್ತವೆ. ಇಂತ ಟೀಕೆಗಳಿಂದ ಪ್ರತಿಯೋರ್ವರು ಕಲಿಯುವುದು ಸಾಕಷ್ಟು ಇವೆ. ಇದು ಭಾರತದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸುತ್ತದೆ. ಎಂದರು.