ಕಣ್ಣೂರು, ಸೆ. 08 (DaijiworldNews/MB) : ಕುಟುಂಬಸ್ಥರ ಎದುರಲ್ಲೇ ಎಸ್ಡಿಪಿಐ ಕಾರ್ಯಕರ್ತನೋರ್ವನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಮಂಗಳವಾರ ಕಣ್ಣೂರು ಜಿಲ್ಲೆಯ ಚಿಟ್ಟಾರಿಕ್ಕಡವು ಸಮೀಪದ ಕೊಚ್ಚೇರಿ ಎಂಬಲ್ಲಿ ನಡೆದಿದೆ.
ಮೃತ ಯುವಕ ಕಣ್ಣವತ್ತ್ ನಿವಾಸಿ ಮುಹಮ್ಮದ್ ಸಲಾಹುದ್ದೀನ್ ತನ್ನ ಇಬ್ಬರು ಸಹೋದರಿಯರೊಂದಿಗೆ ಕಾರಿನಲ್ಲಿ ಕೂತ್ತು ಪರಂಬದಿಂದ ಕನ್ನವತ್ತಿನ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಬೈಕ್ನಲ್ಲಿ ತಂಡವೊಂದು ಬಂದು ಆಕ್ರಮಣ ನಡೆಸಿದೆ ಎಂದು ವರದಿಯಾಗಿದೆ.
ಕಾರಿನ ಹಿಂಬಾಗಕ್ಕೆ ಬೈಕ್ ಡಿಕ್ಕಿ ಹೊಡೆದ ಸಂದರ್ಭ ಸಲಾಹುದ್ದೀನ್ ಕಾರಿನಿಂದ ಇಳಿದಿದ್ದು ಈ ವೇಳೆ ಬೈಕ್ನಲ್ಲಿದ್ದ ಇಬ್ಬರು ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಗಂಭೀರ ಗಾಯಗೊಂಡಿದ್ದ ಸಲಾಹುದ್ದೀನ್ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.