ಕೊಯಮತ್ತೂರು, ಸೆ 09 (DaijiworldNews/PY): ತೃತೀಯ ಲಿಂಗಿಗಳ ಗುಂಪೊಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಕೊವಾಯ್ ಟ್ರಾನ್ಸ್ ಕಿಚನ್ ಎನ್ನುವ ಉಪಹಾರ ಗೃಹವನ್ನು ಆರಂಭಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೊಯಮತ್ತೂರು ತೃತೀಯ ಲಿಂಗಿಗಳ ಸಂಘದ ಮುಖ್ಯಸ್ಥೆ ಸಂಗೀತಾ, ನಾವು ಇನ್ನೊಂದು ಉಪಹಾರಗೃಹವನ್ನು ಕೊಯಮತ್ತೂರಿನಲ್ಲಿ ತೆರೆಯಲು ಯೋಜಿಸಿದ್ದೇವೆ. ನಮ್ಮ ಸಮುದಾಯದ ಮಂದಿ ಭಿಕ್ಷಾಟನೆ ಬಿಟ್ಟು ಸ್ವಾವಲಂಬಿಗಳಾಗುವುದು ಮುಖ್ಯ. ಈ ಕಾರಣದಿಂದ ನಾವು ಉಪಹಾರ ಗೃಹವನ್ನು ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆ ಜಾರಿ ಮಾಡಿದ್ದ ಲಾಕ್ಡೌನ್ ವೇಳೆ ತೃತೀಯ ಲಿಂಗಿಗಳು ಸಂಕಷ್ಟಕ್ಕೊಳಗಾಗಿದ್ದು, ಭಿಕ್ಷಾಟನೆ ಮಾಡುವುದನ್ನು ನಿಲ್ಲಿಸಿ ಸ್ವಾವಲಂಬಿಗಳಾಗಬೇಕೆನ್ನುವ ಮುಖ್ಯ ಉದ್ದೇಶವನ್ನು ಹೊಂದಿದ್ದಾರೆ.