ವಡೋದರ, ಸೆ.9(DaijiworldNews/HR): ಗುಜರಾತ್ ನ ವಡೋದರದ ಸರ್ ಸಯ್ಯಾಜಿರಾವ್ ಜನರಲ್ ಆಸ್ಪತ್ರೆಯ ಕೋವಿಡ್-19 ತುರ್ತು ವಿಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಜರಾತ್ ನ ವಡೋದರದಲ್ಲಿರುವ ಸರ್ ಸಯ್ಯಾಜಿರಾವ್ ಜನರಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದ ವೆಂಟಿಲೇಟರ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ದುರಂತ ಸಂಭವಿಸಿದ್ದು. ಆಸ್ಪತ್ರೆಯಲ್ಲಿ ಅಗ್ನಿ ಅವಘಡದ ಸಂದರ್ಭದಲ್ಲಿ ಸುಮಾರು 300 ಕೊರೋನಾ ಪಾಸಿಟಿವ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಇಲ್ಲಿನ 35 ರೋಗಿಗಳನ್ನು ಬೇರೆ ವಾರ್ಡ್ ಗೆ ವರ್ಗಾಯಿಸಲಾಗಿದ್ದು ನಂತರ ಬೆಂಕಿಯನ್ನು ನಂದಿಸಲಾಯಿತು ಎಂದು ಗುಜರಾತ್ ಆರೋಗ್ಯ ಸಚಿವ ನಿತಿನ್ ಪಟೇಲ್ ತಿಳಿಸಿದ್ದಾರೆ.
ಇದೀಗ ಆಸ್ಪತ್ರೆ ಸಹಜ ಸ್ಥಿತಿಗೆ ಬಂದು ಕಾರ್ಯನಿರ್ವಹಿಸುತ್ತಿದೆ. ಯಾವೊಬ್ಬ ರೋಗಿಗೂ ಗಾಯಗಳಾಗಿಲ್ಲ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಆರೋಗ್ಯ ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.