ಶ್ರೀನಗರ, ಸೆ.9(DaijiworldNews/HR): ಜಮ್ಮು-ಕಾಶ್ಮೀರದ ಬಂಡಿಪೊರ ಜಿಲ್ಲೆಯಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆಯಾದ ಲಷ್ಕರೆ ತಯ್ಬಾಗೆ ನೆರವು ನೀಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಷ್ಕರ್ ಉಗ್ರರ ಸೂಚನೆ ಮೇರೆಗೆ ಈ ಮೂವರು ಕೂಡ ಹಾಜಿನ್ ಪಟ್ಟಣ ಪ್ರದೇಶದ ಮಾರುಕಟ್ಟೆಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಹಿನ್ನೆಲೆ ದಾಳಿ ನಡೆಸಿದ ಪೊಲೀಸರು ಈ ಮೂವರನ್ನ ಬಂಧಿಸಿದ್ದಾರೆ.
ಹಾಜಿನ್ ಪಟ್ಟಣದ ಮೀರ್ ಮೊಹಲ್ಲಾ ಪ್ರದೇಶದ ನಿವಾಸಿಗಳಾದ ಮುಜೀಬ್ ಶಾಮಾಸ್, ತನ್ವೀರ್ ಅಹ್ಮದ್ ಮೀರ್ ಮತ್ತು ಇಮ್ತಿಯಾಜ್ ಅಹ್ಮದ್ ಶೇಖ್ ಬಂಧಿತ ಉಗ್ರರು.
ಬಂಧನ ವೇಳೆ ಇವರಿಂದ ಹ್ಯಾಂಡ್ ಗ್ರೆನೇಡ್, ಹೊಲಿಗೆ ಯಂತ್ರ ಸಮೇತ ಪಾಕ್ ಧ್ವಜ ಮಾಡಲು ಬಳಿಸಿದ ಬಟ್ಟೆಗಳು ಸಿಕ್ಕಿದ್ದು, ವಶಕ್ಕೆ ಪಡೆಯಲಾಗಿದೆ.