ನವದೆಹಲಿ, ಸೆ.9(DaijiworldNews/HR): ಫ್ರಾನ್ಸ್ ನಲ್ಲಿ ತಯಾರಾಗಿ ಜುಲೈನಲ್ಲಿ ಭಾರತಕ್ಕೆ ಬಂದ ಐದು ರಫೇಲ್ ಯುದ್ಧ ವಿಮಾನಗಳನ್ನು ಅಧಿಕೃತವಾಗಿ ವಾಯುಪಡೆಗೆ ಸೆಪ್ಟಂಬರ್ 10ರಂದು ಸೇರ್ಪಡೆಗೊಳ್ಳಲಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಮತ್ತು ಭಾರತದ ಉನ್ನತ ಮಿಲಿಟರಿ ಅಧಿಕಾರಿಗಳು ಅಂಬಾಲಾ ವಾಯುನೆಲೆಯಲ್ಲಿ ಐದು ರಫೇಲ್ ಫೈಟರ್ ಜೆಟ್ಗಳನ್ನು ಭಾರತೀಯ ವಾಯುಪಡೆಗೆ ಸೇರಿಸಲಿರುವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಫ್ರಾನ್ಸ್ ನಿಂದ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಭಾರತ ಖರೀದಿಸಲಿದ್ದು, ಈಗಾಗಲೇ ಐದು ರಫೇಲ್ ಯುದ್ಧ ವಿಮಾನಗಳು ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ನಾಳೆ ಅಧಿಕೃತವಾಗಿ ವಾಯುಪಡೆಗೆ ಸೇರ್ಪಡೆಯಾಗಲಿವೆ.