ರಾಂಚಿ, ಸೆ.9(DaijiworldNews/HR): ಸಾಧ್ವಿ ಮೇಲೆ ಆಶ್ರಮದಲ್ಲೇ ನಾಲ್ವರಿಂದ ಅತ್ಯಾಚಾರ ಎಸಗಿದ ಘಟನೆ ಜಾರ್ಖಂಡ್ ನ ಗೊಡ್ಡ ಜಿಲ್ಲೆಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಘಟನೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ನೇಮಿಸಿದೆ, ತನಿಖೆ ನಡೆಸಿದ ತಂಡ ನಾಲ್ವರು ಆರೋಪಿಗಳಲ್ಲಿ ಓರ್ವ ದೀಪಕ್ ರಾಣಾ(22)ನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಉಳಿದ ಮೂವರಿಗಾಗಿ ಮುಫಾಸಿಲ್ ಪೊಲೀಸರು ಬಲೆ ಬಿಸಿದ್ದಾರೆ.
ಇನ್ನು ಗೊಡ್ಡಾ ಜಿಲ್ಲೆಯಲ್ಲಿರುವ ಆಶ್ರಮವು ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು ಈ ಆಶ್ರಮದಲ್ಲಿ ಐದು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಆರು ಜನರು ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.
ರಾತ್ರಿ ಸುಮಾರು 2.15ರ ಹೊತ್ತಿಗೆ ಆಶ್ರಮ ಪ್ರವೇಶಿಸಿದ ನಾಲ್ವರು ಮಹಿಳೆ ಮಲಗಿದ್ದ ಕೊಠಡಿಗೆ ಪ್ರವೇಶಿಸಿ ಕೊಲೆ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾರೆ ಈ ವೇಳೆ ಆಶ್ರಮದಲ್ಲಿದ್ದ ಉಳಿದ ಮಹಿಳೆಯರು ತಡೆಯಲು ಬಂದಾಗ ಈ ನಾಲ್ವರು ಅವರನ್ನು ಕೊಣೆಯಲ್ಲಿ ಕೂಡಿಹಾಕಿದ್ದರೆ.
ಈ ಬಗ್ಗೆ ಗೊಡ್ಡಾ ಪೊಲೀಸ್ ವರಿಷ್ಠಾಧಿಕಾರಿ ವೈ.ಎಸ್.ರಮೇಶ್, ಪ್ರಕರಣದಲ್ಲಿ ವಿವರವಾದ ತನಿಖೆ ನಡೆಯುತ್ತಿದೆ. ಎಲ್ಲಾ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಮತ್ತು ವಿಶೇಷ ವಿಧಿವಿಜ್ಞಾನ ತಂಡವನ್ನು ಕರೆಸಲಾಗಿದೆ, ಎಂದು ಅವರು ಹೇಳಿದ್ದಾರೆ.