ತಮಿಳುನಾಡು, ಸೆ 09 (DaijiworldNews/PY): ಕೇರಳ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬುಧವಾರ ಬೆಳಗ್ಗೆ ನಗರದ ಅಕ್ಕಸಾಲಿಗರೋರ್ವರ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ಸದಸ್ಯರಿದ್ದ ಎನ್ಐಎ ತಂಡವು ಇಂದು ಮುಂಜಾನೆ ಕ್ರಾಸ್ಕಟ್ ರಸ್ತೆಯಲ್ಲಿರುವ ನಂದಕುಮಾರ್ ಎನ್ನುವವರ ಮನೆ ಮೇಲೆ ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ.
ವಿಚಾರಣೆ ಸಲುವಾಗಿ ನಂದಕುಮಾರ್ ಎಂಬವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜುಲೈ 5ರಂದು ಸುಮಾರು 14.82 ಕೋಟಿ ರೂ ಮೌಲ್ಯದ 30 ಕೆ.ಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು, ಇದನ್ನು ತಿರುವನಂತಪುರದಲ್ಲಿ ಅಬಕಾರಿ ಇಲಾಖೆಯು ಪತ್ತೆ ಮಾಡಿತ್ತು. ಈ ಪ್ರಕರಣದ ಪ್ರಮುಖ ಆರೋಪಿಗಳಾದ ಸ್ವಪ್ನ ಸುರೇಶ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.