ಮಡಿಕೇರಿ, ಸೆ 09 (DaijiworldNews/PY): ನಟಿ ರಾಗಿಣಿ ಬಿಜೆಪಿ ಪಕ್ಷದ ಪ್ರಚಾರಕ್ಕೆ ಬಂದ ಕಾರಣ ಈ ವಿಷಯವಾಗಿ ರಾಜಕೀಯ ಬಣ್ಣ ಬಳಿಯುವುದು ತರವಲ್ಲ. ಕೇವಲ ಬಿಜೆಪಿಯಿಂದ ಮಾತ್ರ ಚುನಾವಣೆ ಸ್ಟಾರ್ ಪ್ರಚಾರವಾಗಿಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಜಿಲ್ಲೆಯ ಬಲಮುರಿಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ರಸ್ತೆ ಕಾಮಗಾರಿ ಭೂಮಿ ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಾಣೆಯ ವೇಳೆ ಸ್ಟಾರ್ ಪ್ರಚಾರ ಸಾಮಾನ್ಯವಾಗಿದೆ. ಆದರೆ, ಬಿಜೆಪಿ ಮಾತ್ರ ಸ್ಟಾರ್ ಪ್ರಚಾರ ಮಾಡಿರುವುದು ಅಲ್ಲ ಬೇರೆ ಪಕ್ಷಗಳು ಕೂಡಾ ಚುನಾವಣೆಯ ಸಂದರ್ಭ ಸ್ಟಾರ್ ಪ್ರಚಾರ ನಡೆಸಿದ್ದಾರೆ. ಈ ವಿಚಾರಕ್ಕಾಗಿ ಯಾಕೆ ರಾಜಕೀಯದ ಬಣ್ಣ ಬಳಿಯಲಾಗುತ್ತಿದೆ ಎನ್ನುವುದು ತಿಳಿದಿಲ್ಲ ಎಂದಿದ್ದಾರೆ.
ಕಳೆದ ಚುನಾವಣೆಯ ಸಂದರ್ಭ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಪರ ನಟಿ ರಾಗಿಣಿ ಪ್ರಚಾರ ಮಾಡಿದ್ದು, ಈ ವೇಳೆ ಕಾಂಗ್ರೆಸ್ ಸೇರಿದಂತೆ ಜೆಡಿಎಸ್ನಿಂದಲೂ ಸ್ಟಾರ್ ಪ್ರಚಾರ ನಡೆದಿದೆ. ಸ್ಟಾರ್ ಪ್ರಚಾರ ಸಂದರ್ಭ ಮುಖಂಡರೊಂದಿಗೆ ರಾಗಿಣಿ ಇರುವ ಫೋಟೋಗಳು ಕೂಡಾ ಇವೆ. ಸ್ಟಾರ್ ಮಾಡಿದ್ದಾಕ್ಕಾಗಿ ಈ ರೀತಿಯಾಗಿ ಮಾತನಾಡುವುದು ಉತ್ತಮವಲ್ಲ ಎಂದು ಹೇಳಿದ್ದಾರೆ.