ಮುಂಬೈ, ಸೆ. 09 (DaijiworldNews/MB) : ಬಾಲಿವುಡ್ ನಟಿ ಕಂಗನಾ ರಣಾವತ್ ವಿವಾದಕ್ಕೆ ಸಂಬಂಧಿಸಿ ಮೌನ ಮುರಿದಿರುವ ಎನ್ಸಿಪಿ ನಾಯಕ ಶರದ್ ಪವಾರ್ ಅವರು, ಬಿಎಂಸಿ ನಿಯಮಗಳ ಪ್ರಕಾರ ನಡೆದುಕೊಂಡರೆ ಅದು ಸರಿ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿರುವ ಅವರು, ಕಂಗನಾ ಅವರು ಕಚೇರಿಗೆ ಸಂಬಂಧಿಸಿ ನನಗೆ ಯಾವುದೇ ಮಾಹಿತಿ ತಿಳಿದಿಲ್ಲ. ಆದರೆ ಅದು ಅನಧಿಕೃತ ಎಂದು ಪತ್ರಿಕೆಗಳಲ್ಲಿ ನಾನು ಓದಿದ್ದೇನೆ. ಮುಂಬೈನಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಮಾಡಿರುವುದು ಹೊಸತಾದ ವಿಚಾರವೇನಲ್ಲ. ಬಿಎಂಸಿ ನಿಯಮಗಳ ಪ್ರಕಾರ ನಡೆಸುಕೊಂಡರೆ ಅದು ಸರಿ ಎಂದು ಹೇಳಿದ್ದಾರೆ.
ಬಾಲಿವುಡ್ ನಟಿ ಕಂಗನಾ ಅವರ ಮಣಿಕರ್ಣಿಕಾ ಫಿಲ್ಮ್ ಕಚೇರಿ ಅನಧಿಕೃತ ಎಂಬ ಕಾರಣದಿಂದ ಬಿಎಂಸಿ ಅಧಿಕಾರಿಗಳು ಧ್ವಂಸಗೊಳಿಸುತ್ತಿದ್ದು, ಕಟ್ಟಡವನ್ನು ಧ್ವಂಸ ಮಾಡಬಾರದು ಎಂದು ಬಾಂಬೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.