ನವದೆಹಲಿ, ಸೆ. 10 (DaijiworldNews/MB) : ಲಡಾಖ್ನ ಪ್ಯಾಂಗಾಂಗ್ ತ್ಸೋನ ಉತ್ತರ ದಂಡೆಯ ಫಿಂಗರ್ 4 ಪ್ರದೇಶವನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ.
ಇತ್ತೀಚೆಗೆ ಈ ಪ್ರದೇಶವನ್ನು ಚೀನಾ ವಶಕ್ಕೆ ಪಡೆಯುವ ಯತ್ನ ಮಾಡಿ ವಿಫಲವಾಗಿತ್ತು. ಅಷ್ಟೇ ಅಲ್ಲದೇ ಪ್ರಚೋದನಕಾರಿ ಚಟುವಚಟಿಕೆಗಳನ್ನು ನಡೆಸಿತ್ತು. ಆದರೆ ಇದೀಗ ಚೀನಾಕ್ಕೆ ತಿರುಗೇಟು ನೀಡಿರುವ ಭಾರತವು ಲಡಾಖ್ ನ ಪ್ಯಾಂಗಾಂಗ್ ತ್ಸೋನ ಉತ್ತರ ದಂಡೆಯ ಫಿಂಗರ್ 4 ಪ್ರದೇಶವನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದ್ದು, ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ತನ್ನ ಸ್ಥಾನದಲ್ಲಿ ಮುಳ್ಳುತಂತಿ ಬೇಲಿ ಹಾಕಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ''ನಾವೀಗ ನಮ್ಮ ಸೈನಿಕರನ್ನು ಪಾಂಗೊಂಗ್ ತ್ಸೊದ ಉತ್ತರ ದಂಡೆಯಲ್ಲಿರುವ ಅತೀ ಎತ್ತರದ ಫಿಂಗರ್ 4ರ ಪ್ರದೇಶದಲ್ಲಿ ನಿಯೋಜನೆ ಮಾಡಿದ್ದು ಚೀನಿಯರ ಎಲ್ಲಾ ಚಟುವಟಿಕೆಯ ಮೇಲೆ ಗಮನವಿರಿಸಲಾಗಿದೆ. ಪ್ಯಾಂಗ್ಯಾಂಗ್ ಸರೋವರದ ದಂಡೆ ಪ್ರದೇಶ ಭಾರತೀಯ ಸೇನೆಯ ವಶದಲ್ಲಿದೆ. ಚೀನಾ ಯಾವುದೇ ಸಂದರ್ಭದಲ್ಲಿ ದಾಳಿಗೆ ಮುಂದಾದರೂ ಅದನ್ನು ವಿಫಲಗೊಳಿಸಲಾಗುತ್ತದೆ'' ಎಂದು ತಿಳಿಸಿದ್ದಾರೆ.