ಬೀದರ್, ಸೆ. 10 (DaijiworldNews/MB) : ಪಶು ಸಂಗೋಪನೆ, ಹಜ್ ಹಾಗೂ ವಕ್ಫ್ ಸಚಿವ ಪ್ರಭು ಚವ್ಹಾಣ್ ಅವರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಚವ್ಹಾಣ್ ಅವರ ಕಾರು ಚಾಲಕ, ಗನ್ ಮ್ಯಾನ್, ಆಪ್ತ ಸಹಾಯಕರಿಗೆ ಸೆಪ್ಟೆಂಬರ್ 8 ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಈ ಹಿನ್ನೆಲೆ ಸಚಿವರು ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದರು.
ಬುಧವಾರ ಸಚಿವರು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು ಗುರುವಾರ ಸೋಂಕು ಇರುವುದು ದೃಢಪಟ್ಟಿದೆ. ಹಾಗೆಯೇ ಸಚಿವರ ಸಹೋದರ, ಪುತ್ರ ದಿಲೀಪ್ ಚವ್ಹಾಣ್ ಅವರಿಗೂ ಸೋಂಕು ಧೃಢಪಟ್ಟಿದೆ ಎಂದು ವರದಿ ತಿಳಿಸಿದೆ.