ಡೆಹ್ರಾಡೂನ್, ಸೆ. 10 (DaijiworldNews/MB) : ಉತ್ತರಾಖಂಡ್ನ ರಾಮನಗರದಲ್ಲಿ 13 ಮಿಲಿಯನ್ ವರ್ಷ ಹಿಂದಿನ ವಾನರ ಪ್ರಭೇದದ ಪಳೆಯುಳಿಕೆ ಪತ್ತೆಯಾಗಿದೆ.
'ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿ ಬಿ' ಜರ್ನಲ್ನಲ್ಲಿ ಸಂಶೋಧನಕಾರರು ಪತ್ತೆಹಚ್ಚಿದ ಈ ಪಳೆಯುಳಿಕೆಯ ಸಂಶೋಧನಾ ವರದಿ ಪ್ರಕಟವಾಗಿದ್ದು ಈಗ ಪತ್ತೆಯಾಗಿರುವ ಪಳೆಯುಳಿಕೆಯು ಆಧುನಿಕ ಗಿಬ್ಬನ್ ವಾನರ ಪ್ರಭೇದದ ಅತ್ಯಂತ ಸಮೀಪದ ಪೂರ್ಜಜ ಎಂದು ಹೇಳಲಾಗಿದೆ.
ಈ ಸಂಶೋಧನೆ ಜೀವ ಪ್ರಭೇದದ ಪ್ರಮುಖ ಕೊಂಡಿಯ ಅಧ್ಯಯನಕ್ಕೆ ಸಹಾಯಕಾರಿಯಾಗಲಿದ್ದು ಇಂದಿನ ಗಿಬ್ಬನ್ನ ಪೂರ್ವಜರು ಆಫ್ರಿಕಾದಿಂದ ಏಷ್ಯಾಕ್ಕೆ ವಲಸೆ ಬಂದ ಇತಿಹಾಸದ ಬಗ್ಗೆ ತಿಳಿಯಲಿದೆ ಎಂದು ಹೇಳಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ನ್ಯೂಯಾರ್ಕ್ ಸಿಟಿ ಯೂನಿವರ್ಸಿಟಿಯ ಕ್ರಿಸ್ಟೋಫರ್ ಸಿ. ಗಿಲ್ಬರ್ಟ್, ರಾಮನಗರದಲ್ಲಿ ಈವರೆಗೂ ಗಿಬ್ಬನ್ ವಾನದ ಪ್ರಭೇದದ ಪಳೆಯುಳಿಕೆ ಪತ್ತೆಯಾಗಿರದ ಕಾರಣ ಇದು ಗಿಬ್ಬನ್ ಪ್ರಭೇದದ ಅಂತ್ಯಂತ ಸಮೀಪದ ಪೂರ್ವಜ ಎಂಬ ಊಹೆ ಮಾಡಲಾಗಿದೆ ಎಂದು ಹೇಳಿದ್ದು ಈ ಬಗ್ಗೆ ಮಾಹಿತಿ ನೀಡಿರುವ ಸಂಶೋಧಕರು ಈಗ ಪತ್ತೆಯಾಗಿರುವ ಈ ವಾನರ ಪಳೆಯುಳಿಕೆ ಯಾವುದೇ ವಾನರ ಪ್ರಭೇದದೊಂದಿಗೆ ಹೋಲಿಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.