ಬೆಂಗಳೂರು, ಸೆ. 10 (DaijiworldNews/MB) : ಕೇಂದ್ರ ಸರ್ಕಾರವು 9 ರಿಂದ 12ನೇ ತರಗತಿ ಮಕ್ಕಳಿಗೆ ಶಾಲೆಯನ್ನು ಭಾಗಶಃ ಆರಂಭ ಮಾಡಲು ಅವಕಾಶ ನೀಡಿದ್ದು ಈ ಹಿನ್ನೆಲೆ ಶಾಲೆಯನ್ನು ಆರಂಭ ಮಾಡುವುದಕ್ಕೂ ಮುನ್ನ ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನಗಳಿಗಾಗಿ ರಾಜ್ಯ ಸರ್ಕಾರವು ಕಾಯುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ''ಶಾಲೆಗಳು ಭಾಗಶಃ ಪುನರಾರಂಭ ಮಾಡಲು ಕೇಂದ್ರವು ಅವಕಾಶ ನೀಡಿದೆ. ಆದರೆ ಎಂದಿನಿಂದ ಇದು ಅನುಷ್ಟಾನ ಮಾಡಿಬಹುದು ಎಂಬುದರ ಕುರಿತಾದ ನಿಯಮಾವಳಿಗಳಿಗಾಗಿ ರಾಜ್ಯ ಸರ್ಕಾರವು ಕಾಯುತ್ತಿದೆ'' ಎಂದು ತಿಳಿಸಿದ್ದಾರೆ.
ಇತರೆ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಲು ಕರ್ನಾಟಕ ಮುಂದಾಳತ್ವ ವಹಿಸಲಿದೆಯೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ''ರಾಜ್ಯ ಸರ್ಕಾರ ಎಂದಿಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆಯೇ ಕಾರ್ಯ ನಿರ್ವಹಿಸುತ್ತದೆ'' ಎಂದು ತಿಳಿಸಿದ್ದಾರೆ.
ಇನ್ನು ರಾಜ್ಯ ಸರ್ಕಾರವು ವಿದ್ಯಾರ್ಥಿ ಶಿಕ್ಷಕರ ಸಂವಾದಕ್ಕೆ ವ್ಯವಸ್ಥೆಯನ್ನು ಮಾಡುತ್ತಿದ್ದು ಶಾಲಾ ಆವರಣ ಮಾತ್ರವಲ್ಲ ಬೋಧನೆಗೆ ಬಳಸಲಾಗುತ್ತಿಲ್ಲ. ಬದಲಾಗಿ ಸಾರ್ವಜನಿಕ ಸ್ಥಳಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.