ಲಕ್ನೋ, ಸೆ.10(DaijiworldNews/HR): ತಾಯಿ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ಮಕ್ಕಳೇ ದಲ್ಲಾಳಿಗಳಂತೆ ಸಹಕರಿಸುತ್ತಿದ್ದ ವಿಚಾರ ಲಖೀಮಪುರ ಜಿಲ್ಲೆಯ ಕೋತವಾಲಿಯಲ್ಲಿ ನಡೆಯುತ್ತಿದ್ದು, ಪೊಲೀಸ್ ದಾಳಿಯ ವೇಳೆ ಬೆಳಕಿಗೆ ಬಂದಿದೆ.
ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಪೊಲೀಸರು ಐವರು ಯುವತಿಯರು ಸೇರಿ ಹತ್ತು ಮಂದಿಯನ್ನು ಬಂಧಿಸಿದ್ದು,ಜೊತೆಗೆ ಆರೋಪಿಗಳು ಬಳಸುತ್ತಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯನ್ನು ಸರಗನಾ ಎಂದು ಗುರುತಿಸಲಾಗಿದ್ದು,ಈಕೆಯ ಇಬ್ಬರು ಮಕ್ಕಳು ದಂಧೆಯಲ್ಲಿ ಈಕೆಗೆ ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ. ಗ್ರಾಹಕರಿಗೆ ಹುಡುಗಿಯರ ಫೋಟೋ ತೋರಿಸಿ ಅವರನ್ನು ಮನೆಗೆ ಕರೆದುಕೊಂಡು ಬರುವ ಕೆಲಸ ಇವರದಾಗಿತ್ತು ಎಂದು ತಿಳಿದು ಬಂದಿದೆ.
ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ನಮಗೆ ದೂರುಗಳು ಬಂದಿದ್ದು, ಈ ಕಾರಣದಿಂದಾಗಿ ಮಹಿಳಾ ಠಾಣೆಯ ಪೊಲೀಸರು ದಾಳಿ ಮಾಡಿದರು ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.