ಅಸ್ಸಾಂ, ಸೆ. 10 (DaijiworldNews/MB) : ಅಸ್ಸಾಂನ ಅತಿದೊಡ್ಡ ನಗರವಾದ ಗುವಾಹಟಿಯಲ್ಲಿ ಕೊರೊನಾ ಸಂಬಂಧಿಸಿ ಸಾವನ್ನಪ್ಪಿದ ಸುಮಾರು 400 ಜನರ ಅಂತ್ಯಸಂಸ್ಕಾರ ಮಾಡಿದ ನಲವತ್ಮೂರು ವರ್ಷದ ವ್ಯಕ್ತಿಯೊಬ್ಬರು ಬಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸುಮಾರ 400 ಕೊರೊನಾ ಸಂತ್ರಸ್ತರ ಅಂತ್ಯಸಂಸ್ಕಾರ ಮಾಡಿದ ರಾಮಾನಂದ ಸರ್ಕಾರ್ ಅವರು, ನಾನು ಏಪ್ರಿಲ್ನಿಂದ ಈ ಮಂಗಳವಾರದವರೆಗೆ ಸುಮಾರು 400 ಮೃತದೇಹಗಳ ಶವ ಸಂಸ್ಕಾರ ಮಾಡಿದ್ದೇನೆ. ಮೊದ ಮೊದಲು ದಿನಕ್ಕೆ ಒಂದಿಬ್ಬರ ಅಂತ್ಯ ಸಂಸ್ಕಾರ ಮಾಡಲು ಸಿಗುತ್ತಿತ್ತು ಆದರೆ ಈಗ ದಿನಕ್ಕೆ 10-12 ಶವಸಂಸ್ಕಾರಗಳನ್ನು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ, ಅಸ್ಸಾಂನಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳವಾಗುತ್ತಿದ್ದು ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯೂ ಕೂಡಾ ಅಧಿಕವಾಗುತ್ತಿದೆ ಎಂದು ವರದಿಯಾಗಿದೆ.
ಕೆಲವು ದಿನಗಳಿಂದ ನಾನು ಹಾಗೂ ನನ್ನ ಇಬ್ಬರು ಸಹಾಯಕರು ಮಧ್ಯಾಹ್ನ ಸುಮಾರು 3 ಗಂಟೆಗೆ ಅಂತಿಮ ಸಂಸ್ಕಾರ ನಡೆಸಲು ಆರಂಭಿಸುತ್ತೇವೆ. ರಾತ್ರಿ ಸುಮಾರು 2 ಅಥವಾ 3 ಗಂಟೆಯ ಹೊತ್ತಿಗೆ ಎಲ್ಲಾ ದೇಹಗಳ ಅಂತ್ಯ ಸಂಸ್ಕಾರ ಮುಗಿಯುತ್ತದೆ. ನಾನು ದಣಿದಿದ್ದೇವೆ, ನಮಗೆ ಯಾವುದೇ ವಿಶ್ರಾಂತಿ ಇಲ್ಲ. ಮೊದ ಮೊದಲು ಕೊರೊನಾ ಸೋಂಕಿತರ ಮೃತ ದೇಹದ ಅಂತ್ಯ ಸಂಸ್ಕಾರ ಮಾಡಲು ಭಯ ಪಡುತ್ತಿದೆ. ಆದರೆ ಈಗ ಹಾಗೆ ಭಯವಿಲ್ಲ. ಆದರೆ ನಾನು ದಣಿದು ಹೋಗಿದ್ದೇನೆ ಎಂದು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಗುವಾಹಟಿಗೆ ಬಂದ್ದಿರುವ ಸರ್ಕಾರ್ ಮಧ್ಯ ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಜಾಗಿರೋಡ್ ನಿವಾಸಿಯಾಗಿದ್ದಾರೆ. ಹಲವು ದಿನಗಳಿಂದ ಸರ್ಕಾರಿ ವೆಚ್ಚದಲ್ಲಿ ಹೊಟೇಲ್ನಲ್ಲಿ ವಾಸಿಸುತ್ತಿದ್ದಾರೆ. ಹಲವು ಬಾರಿ ಅವರ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ಅವರಿಗೆ ಸೋಂಕು ಇರುವುದು ಪತ್ತೆಯಾಗಿಲ್ಲ.