ಬಾರಾಮುಲ್ಲಾ, ಸೆ.10(DaijiworldNews/HR): ಉಗ್ರರು ಹೂತಿಟ್ಟಿದ್ದ ಪ್ರಬಲ ಸುಧಾರಿತ ಸ್ಫೋಟಕ ಸಾಧನವನ್ನು ಭದ್ರತಾ ಪಡೆ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿ ಮತ್ತೊಂದು ದೊಡ್ಡ ದುರಂತವನ್ನು ತಪ್ಪಿಸಿದ ಘಟನೆ ಉತ್ತರ ಕಾಶ್ಮೀರದಲ್ಲಿ ನಡೆದಿದೆ.
ತಪಾಸಣೆಯ ಸಮಯದಲ್ಲಿ ಸೇನೆ ಮತ್ತು ಪೊಲೀಸರ ಜಂಟಿ ತಂಡ ಬಾರಾಮುಲ್ಲಾದ ಚಾಟ್ಲೂರಾ ವಾಟರ್ಗ್ಯಾಮ್ನಲ್ಲಿ ಪ್ರಯಾಣಿಕರ ಶೆಡ್ ಬಳಿ ಅನುಮಾನಾಸ್ಪದ ವಸ್ತುವನ್ನು ಗಮನಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶವನ್ನು ಮುಚ್ಚಿ, ರಸ್ತೆಯ ಸಂಚಾರವನ್ನು ಸ್ಥಗಿತಗೊಳಿಸಿ, ಬಳಿಕ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಯಾವುದೇ ಹಾನಿಯಾಗದಂತೆ ಪ್ರಬಲ ಸುಧಾರಿತ ಸ್ಫೋಟಕ ಸಾಧನವನ್ನು ನಿಷ್ಕ್ರಿಯಗೊಳಿಸಿದೆ.