ಬೆಂಗಳೂರು,ಸೆ.10(DaijiworldNews/HR): ಸಿನಿಮಾ ನಟಿ ಎಂಬ ಕಾರಣಕ್ಕೆ ರಾಗಿಣಿಯನ್ನು ಉಪ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರಕ್ಕೆ ತಗೆದುಕೊಂಡಿದ್ದೆವು, ಡ್ರಗ್ಸ್ ಹುಡುಗಿ ಅಂತ ಅಲ್ಲ ಎಂಬುದಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವರೊಂದಿಗೆ ಡ್ರಗ್ಸ್ ಜಾಲದಲ್ಲಿರುವವರು ಫೋಟೋ ತೆಗೆಸಿಕೊಂಡಿದ್ದಾರೆ ಎಂದಾಕ್ಷಣ ಪ್ರಭಾವ ಬೀರುತ್ತಾರೆ ಎನ್ನುವುದು ತಪ್ಪು. ಡಿ.ಕೆ.ಶಿವಕುಮಾರ್ ಜತೆಗೆ ಫೋಟೋ ತೆಗೆಸಿಕೊಂಡಿರುವುದು ಬಂದಿದೆ. ಹಾಗೆಂದ ಮಾತ್ರ ಸ್ನೇಹ, ನಂಟು ಕಲ್ಪಿಸಲಾಗದು. ಪ್ರಕರಣ ತನಿಖೆ ಹಂತದಲ್ಲಿರುವಾಗ ಏನನ್ನದಾರೂ ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇನ್ನು ತಮ್ಮ ಸ್ನೇಹಿತರಿಗೆ ತಾಳ್ಮೆ ಮಂತ್ರ ಬೋಧಿಸಿದ ರಮೇಶ್ ಜಾರಕಿಹೊಳಿ , ಸಚಿವರಾಗುವುದಕ್ಕೆ ಆಕಾಂಕ್ಷಿಗಳು ಕಾಯಬೇಕು. ನಾವು 14 ತಿಂಗಳು ಕಾದಿದ್ದೇವೆ. ಅದರಲ್ಲಿ 8 ತಿಂಗಳು ಕೋರ್ಟ್ಗೆ ಅಲೆದಿದ್ದೇವೆ ಎಂದರು.