ನವದೆಹಲಿ, ಸೆ. 10 (DaijiworldNews/MB) : ಕೊರೊನಾ ಲಾಕ್ಡೌನ್ ಕಾರಣ ಸಾಲ ಮರು ಪಾವತಿ ಮಾಡಲಾಗದ ಗ್ರಾಹಕರ ವಿಚಾರಕ್ಕೆ ಸಂಬಂಧಿಸಿ ಕೇಂದ್ರ 2 ವಾರಗಳಲ್ಲಿ ಅಂತಿಮ ನಿರ್ಧಾರಕ್ಕೆ ಬರಬೇಕು ಎಂದು ಸುಪ್ರೀಂ ಕೋರ್ಟ್ ಗಡುವು ನೀಡಿದೆ.
ಕೊರೊನಾ ಕಾರಣದಿಂದಾಗಿ ಸಾಲಗಾರರಿಗೆ ಆರ್ಥಿಕ ಹೊರೆ ಕಡಿಮೆಗೊಳಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರಿಚಯಿಸಿದ ಮೊರಟೋರಿಯಂ ಸಂದರ್ಭದಲ್ಲಿ ಮುಂದೂಡಲ್ಪಟ್ಟ ಇಎಂಐಗಳ ಮೇಲಿನ ಬಡ್ಡಿ ಮನ್ನಾ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ಮಾಡಿದ್ದು ಕೇಂದ್ರಕ್ಕೆ ಅಂತಿಮ ತೀರ್ಮಾನಕ್ಕೆ ಬರುವಂತೆ ತಿಳಿಸಿದೆ.
ಈ ಎರಡು ವಾರದಲ್ಲಿ ಏನಾಗುತ್ತದೆ? ನಾವು ಕೇಂದ್ರಕ್ಕೆ ಮತ್ತೊಮ್ಮೆ ಸಮಯವಕಾಶ ನೀಡುತ್ತೇವೆ. ಇದು ಆರ್ಬಿಐ ಹಾಗೂ ಕೇಂದ್ರಕ್ಕೆ ನೀಡುವ ಅಂತಿಮ ಅವಕಾಶ, ಈ ಪ್ರಕರಣವನ್ನು ಇನ್ನಷ್ಟು ಕಾಲ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿದೆ.