ನವದೆಹಲಿ,ಸೆ.10(DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರು ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ಇಂದು 20,050 ಕೋಟಿ ರೂ.ಗಳ ಯೋಜನೆಗೆ ಚಾಲನೆ ನೀಡಿದ್ದಾರೆ.
ಡಿಜಿಟಲ್ ವೇದಿಕೆ ಮೂಲಕ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಮೋದಿಯವರು ಚಾಲನೆ ನೀಡಿದ್ದು, ಅದರ ಜೊತೆಗೆ ಸಮಗ್ರ ತಳಿ ಸುಧಾರಣಾ ಮಾರುಕಟ್ಟೆ ಮತ್ತು ಮಾಹಿತಿ ಪೋರ್ಟಲ್ ಇ-ಗೋಪಾಲ ಆಯಪ್ ಅನ್ನೂ ಉದ್ಘಾಟಿಸಿದ್ದಾರೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕೆ ಅಭಿವೃದ್ಧಿ ಮತ್ತು ರಫ್ತು ವಹಿವಾಟುಗಳಿಗೆ ಉತ್ತೇಜನ ನೀಡಲು ಈ ಯೋಜನೆಗೆ ಸಲಹೆ ನೀಡಲಾಗಿದೆ.
ಈ ಯೋಜನೆಯಿಂದ ಸುಮಾರು 55 ಲಕ್ಷ ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ. ಈ ಯೋಜನೆಯಡಿ ಐದು ವರ್ಷಗಳಲ್ಲಿ ಹೆಚ್ಚುವರಿ 70 ಲಕ್ಷ ಟನ್ ಮೀನುಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ. ಇದರಿಂದ ಮೀನು ರಫ್ತು ದ್ವಿಗುಣವಾಗಲಿದ್ದು 1,00,000 ಕೋಟಿ ರೂ. ಅದೇ ಸಮಯದಲ್ಲಿ, ಪ್ರಧಾನ ಮಂತ್ರಿ ರೈತರ ನೇರ ಬಳಕೆಗಾಗಿ ಸಮಗ್ರ ತಳಿ ಸುಧಾರಣಾ ಮಾರುಕಟ್ಟೆ ಮತ್ತು ಮಾಹಿತಿ ಪೋರ್ಟಲ್ ಇ-ಗೋಪಾಲಾ ಆಪ್ ಅನ್ನು ಸಹ ಪ್ರಾರಂಭಿಸಿದರು.