ಮುಂಬೈ, ಸೆ.10(DaijiworldNews/HR): ಫೇಸ್ ಬುಕ್, ಟ್ವೀಟರ್, ಇನ್ಸ್ಟಾಗ್ರಾಮ್ ನಲ್ಲಿಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಅಸಭ್ಯ ಭಾಷೆಯಲ್ಲಿ ದೂಷಿಸಿದ ಆರೋಪದಲ್ಲಿ ಬಾಂಬೆ ಹೈಕೋರ್ಟ್ ವಕೀಲ ನಿತಿನ್ ಮಾನೆ ಕಂಗನಾ ರಣಾವತ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಕಂಗನಾ ಅವರು 'ಮೂವಿ ಮಾಫಿಯಾ'ವನ್ನು ರಾಜ್ಯ ಸರ್ಕಾರದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಲಾಗಿದ್ದು, ವಿಖ್ರೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಭಾರತೀಯ ದಂಡ ನ್ಯಾಯಾಲಯದ (ಐಪಿಸಿ) ಸೆಕ್ಷನ್ 499 ರ ಅಡಿಯಲ್ಲಿ ದೂರು ದಾಖಲಾಗಿದ್ದು, ಕ್ರಿಮಿನಲ್ ಮಾನಹಾನಿಗೆ ಸಂಬಂಧಿಸಿದೆ.
ವಾಣಿಜ್ಯ ನಗರಿ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಆಡಳಿತಾರೂಢ ಶಿವಸೇನೆ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈಗೆ ಆಗಮಿಸಿದ್ದು, ಕಂಗನಾ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಿತ್ತು. ಬುಧವಾರ ಬೆಳಗ್ಗೆ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ಅಧಿಕಾರಿಗಳು ಅಕ್ರಮವಾಗಿ ಕಚೇರಿ ಕಟ್ಟಿರುವುದಾಗಿ ಆರೋಪಿಸಿ ಕಟ್ಟಡವನ್ನು ನೆಲಸಮಗೊಳಿಸಿದ್ದಾರೆ.
ಬಿಎಂಸಿ ಕಾನೂನಿನ ಪ್ರಕಾರದ ಅನುಮತಿ ತಯಾರಿಸಲು ನಟಿ ವಿಫಲರಾಗಿದ್ದಾರೆ ಎಂದು ಹೇಳಿದ ನಂತರ ಈ ಕ್ರಮಕ್ಕೆ ಆದೇಶಿಸಿದ್ದಾರೆ. ಮತ್ತು ಕಂಗನಾಗೆ ಒಂದು ತಿಂಗಳಿನಿಂದ ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬಿಎಂಸಿ ಕಾನೂನಿನ ಪ್ರಕಾರದ ಅನುಮತಿ ್ಪಡೆಯಲು ವಿಫಲರಾದ ನಂತರ ಈ ಕ್ರಮಕ್ಕೆ ಆದೇಶಿಸಲಾಗಿದೆ. ಕಂಗನಾ ಒಂದು ತಿಂಗಳಿನಿಂದ ಒಂದು ವರ್ಷದವರೆಗೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಹಾಗೆಯೇ ದಂಡವನ್ನು ಕೂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.