ನವದೆಹಲಿ, ಸೆ. 11 (DaijiworldNews/MB) : ಗಡಿಯಿಂದ ಸಂಪೂರ್ಣವಾಗಿ ಸೇನಾಪಡೆ ಹಿಂಪಡೆಯಲು ಭಾರತ - ಚೀನಾ ವಿದೇಶಾಂಗ ಸಚಿವರು ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತ ಹಾಗೂ ಚೀನಾ ಗಡಿ ಉದ್ವಗ್ನತೆಗೆ ಸಂಬಂಧಿಸಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹಾಗೂ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಾತುಕತೆ ನಡೆಸಿ ಗಡಿ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನು ಗಡಿ ಸಮಸ್ಯೆಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಜೈಶಂಕರ್ ಅವರು, ಚೀನಾ ಸೇನೆಯು ಪ್ರಚೋದನಕಾರಿ ವರ್ತನೆ ತೋರುತ್ತಿದೆ. ಭಾರತ-ಚೀನಾ ಮಧ್ಯೆ ಏರ್ಪಟ್ಟಿದ್ದ ದ್ವಿಪಕ್ಷೀಯ ಒಪ್ಪಂದ ಮತ್ತು ಶಿಷ್ಟಾಚಾರಗಳನ್ನು ಮುರಿಯುತ್ತಿದೆ ಎಂದಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಉಭಯ ರಾಷ್ಟ್ರಗಳು ಒಪ್ಪಂದಗಳನ್ನು ಪಾಲಿಸಲು ಮತ್ತು ಯಥಾಸ್ಥಿತಿ ಕಾಯ್ದುಕೊಳ್ಳಲು. ಹಾಗೆಯೇ ಈ ವಿವಾದ ಭುಗಿಲೇಳದಂತೆ ನೋಡಿಕೊಳ್ಳಲು ತೀರ್ಮಾನಕ್ಕೆ ಬಂದಿರುವುದಾಗಿ ವರದಿಯಾಗಿದೆ.