ನವದೆಹಲಿ, ಸೆ. 11 (DaijiworldNews/MB) : ಚೀನಿಯರು ಅತಿಕ್ರಮಿಸಿದ ನಮ್ಮ ಭೂಮಿ ಹಿಂಪಡೆಯುವಿರಾ? ಅಥವಾ ಅದನ್ನೂ ದೇವರ ಆಟವೆಂದು ಬಿಡಲಾಗುತ್ತದೆಯೇ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಚೀನಿಯರು ನಮ್ಮ ಭೂಮಿಯನ್ನು ಕಬಳಿಸಿದ್ದಾರೆ. ಅದನ್ನು ಮರಳಿ ಪಡೆಯಲು ಭಾರತ ಸರ್ಕಾರವು ಯಾವಾಗ ನಿಖರವಾದ ಯೋಜನೆ ಮಾಡುತ್ತದೆ? ಅಥವಾ ಅದನ್ನೂ 'ದೇವರ ಆಟ'ವೆಂದು ಬಿಡಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಭಾರತ ಚೀನಾದ ಗಡಿಯಲ್ಲಿ ದಿನದಿಂದ ದಿನಕ್ಕೆ ಉದ್ವಿಗ್ನತೆಗೆ ತಿರುಗುತ್ತಿರುವ ಗಡಿ ಸಮಸ್ಯೆಗೆ ಸಂಬಂಧಿಸಿ ಉಭಯ ದೇಶಗಳ ವಿದೇಶಾಂಗ ಸಚಿವರುಗಳು ಮಾತುಕತೆ ನಡೆಸಿ ಈ ಹಿಂದೆ ಮಾಡಲಾದ ಒಪ್ಪಿಗೆಯನ್ನು ಪಾಲಿಸುವ ತೀರ್ಮಾನಕ್ಕೆ ಬಂದಿರುವುದಾಗಿ ವರದಿ ತಿಳಿಸಿದೆ.