ಬೆಂಗಳೂರು, ಸೆ 11 (DaijiworldNews/PY): ಡ್ರಗ್ ದಂಧೆ ಪ್ರಕರಣಕ್ಕೆ ಸಂಬಂಧ ಬಂಧನವಾಗಿರುವ ನಟಿ ಸಂಜನಾರನ್ನು ನಾನು ಬೆಂಗಳೂರಿನಲ್ಲೇ ನೋಡಿಲ್ಲ, ಶ್ರೀಲಂಕಾದಲ್ಲಿ ಹೇಗೆ ನೋಡಲಿ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಕೇಳಿದ್ದಾರೆ.
ಈ ಬಗ್ಗೆ ತಮ್ಮ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಈಗ ಬಂಧನಲ್ಲಿರುವ ಫಾಜಿಲ್ಗೂ ಹಾಗೂ ನನಗೂ ನಾಲ್ಕು ವರ್ಷದ ಹಿಂದೆ ಪರಿಚಯವಿತ್ತು. ಆದರೆ, ಈಗ ಪರಿಚಯವಿಲ್ಲ. ಯಾವುದೋ ವ್ಯಕ್ತಿಗಳು ಬರುತ್ತಾರೆ ಎಂದು ಎಲ್ಲರನ್ನೂ ಆಪ್ತರು ಎಂದು ಹೇಳಲು ಸಾಧ್ಯವೇ ಎಂದು ಕೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಈ ಬಗ್ಗೆ ತನಿಖೆ ಮಾಡಲಿ. ಸದ್ಯ ನಟಿ ಸಂಜನಾ ಕೂಡಾ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಪ್ರಕರಣದಲ್ಲಿ ನಾನು ಪಾಲ್ಗೊಂಡಿದ್ದಲ್ಲಿ ರಾಜ್ಯದಲ್ಲಿ ನಾನು ಹೊಂದಿರುವ ಆಸ್ತಿಯನ್ನು ಸರ್ಕಾರಕ್ಕೆ ನೀಡುತ್ತೇನೆ ಎಂದು ಹೇಳಿದರು.
ಇನ್ನು ಸಂಬರಗಿ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಸಂಬರಗಿ ಯಾರು? ಅವರು ಹೇಳಿದ್ದನ್ನು ಯಾಕೆ ಕೇಳಿಸಿಕೊಂಡಿದ್ದು. ಸರ್ಕಾರ ಈ ಬಗ್ಗೆ ತನಿಖೆ ಮಾಡಲಿ ನಾನು ಕಾನೂನಾತ್ಮಕ ಹೋರಾಟ ನಡೆಸುತ್ತೇನೆ ಎಂದು ತಿಳಿಸಿದರು.