ತುಮಕೂರು , ಸೆ 12(DaijiworldNews/PY): 60 ವಷ೯ದ ಹಿರಿಯ ನಾಗರಿಕರು ಆಧಾರ್ ಕಾಡ್೯ ಹೊಂದಿದ್ದರೆ ಅವರ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ ಕಲ್ಪಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಆಧಾರ್ ಕಾಡ್೯ನಲ್ಲಿರುವ ಮಾಹಿತಿಯಂತೆ, ಹಿರಿಯ ನಾಗರಿಕರಿಕರಿಗೆ 60 ವಷ೯ ಆಗುತ್ತದೆಯೋ ಅಂತಹ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನವನ್ನು ಮನೆ ಬಾಗಿಲಿಗೆ ಕಲ್ಪಿಸಲಾಗುವುದು ಎಂದಿದ್ದಾರೆ.
ಸುಮಾರು 7000 ಕೋಟಿ ರೂ. ಗಳನ್ನು ರಾಜ್ಯ ಸಕಾ೯ರ ವೃದ್ಧಾಪ್ಯ ವೇತನಕ್ಕೆ ಖಚು೯ ಮಾಡುತ್ತಿದೆ. ಆದರೆ, ಈ ನಡುವೆ ಅಹ೯ಫಲಾನುಭವಿಗಳಿಗೆ ಲೋಪ ಕಂಡುಬಂದ ಕಾರಣ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ಕ್ರಮವನ್ನು ಶೀಘ್ರವೇ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.