ನವದೆಹಲಿ, ಸೆ 12(DaijiworldNews/PY): ಭಾರತದಲ್ಲಿ ಕೋವಾಕ್ಸಿನ್ ಹಂತ-1 ಕ್ಲಿನಿಕಲ್ ಪ್ರಯೋಗಗಳಲ್ಲಿ ಪ್ರಾಣಿಗಳ ಮೇಲೆ ಮಾಡಿದ ಪ್ರಯೋಗದಲ್ಲಿ ಉತ್ತಮ ಫಲಿತಾಂಶ ಬಂದಿರುವುದಾಗಿ ತಿಳಿದುಬಂದಿದೆ.
ಈ ಕೊರೊನಾ ಲಸಿಕೆಯನ್ನು ಐಸಿಎಂಆರ್ ಹಾಗೂ ಭಾರತ್ ಬಯೊಟೆಕ್ ಇಂಟರ್ ನ್ಯಾಷನಲ್ ಸ್ಥಳೀಯವಾಗಿ ಅಭಿವೃದ್ದಿಪಡಿಸಿದ್ದು, ಇದನ್ನು ದೇಶದಾದ್ಯಂತ 12 ಸಂಸ್ಥೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
ಇದರ ಫಲಿತಾಂಶ ಪರಿಣಾಮಕಾರಿಯಾಗಿದ್ದು, ಪ್ರಾಣಿಗಳ ಶ್ವಾಸಕೋಶದ ಅಂಗಾಶಗಳಲ್ಲಿನ ವೈರಸ್ ಅನ್ನು ಕಡಿಮೆ ಮಾಡುತ್ತದೆ.
ಈ ಲಸಿಕೆಯ ಎರಡು ಡೋಸ್ ವ್ಯಾಕ್ಸಿನೇಶನ್ ರೋಗನಿರೋಧಕ ಚುಚ್ಚುಮದ್ದನ್ನು ಪ್ರಾಣಿಗಳಿಗೆ ನೀಡಿದ ಬಳಿಕ ಯಾವುದೇ ರೀತಿಯಾದ ಪ್ರತಿಕೂಲ ಘಟನೆಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.