ಚಿಕ್ಕಬಳ್ಳಾಪುರ, ಸೆ 12(DaijiworldNews/PY): ಕಾಂಗ್ರೆಸ್ಸಿಗರು ಡ್ರಗ್ ಮಾಫಿಯಾ ವಿಚಾರವನ್ನು ಹಗುರವಾಗಿ ತೆಗೆದುಕೊಂಡಂತೆ ತೋರುತ್ತದೆ. ಈ ಮಾಫಿಯಾವನ್ನು ಕಿತ್ತೆಸೆಯಲು ವಿರೋಧ ಪಕ್ಷದವರೂ ಕೂಡಾ ನೆರವಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ ಮಾಫಿಯಾದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಹಾಗೂ ಸಿಎಂ ಅವರು ತಿಳಿಸಿದ್ದಾರೆ. ಆದರೆ, ಹಿಂದಿನ ಸಕಾ೯ರಗಳು ಡ್ರಗ್ ವಿಚಾರದಲ್ಲಿ ಯಾಕೆ ಗಮನಹರಿಸಲ್ಲ ಎಂದು ಕೇಳಿದರು.
ಡ್ರಗ್ ಮಾಫಿಯಾ ಗಂಭೀರವಾದ ವಿಚಾರವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟವಾದ ಕಾಯ್ದೆ ತಂದು ಯುವಕರನ್ನು ರಕ್ಷಿಸುವುದು ಅಗತ್ಯ ಎಂದರು.
ಜಮೀರ್ ಅಹ್ಮದ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇವರಿಗೆಅಲ್ಪಸಂಖ್ಯಾತ ಎನ್ನುವುದು ರಕ್ಷಣೆಗೆ ಟ್ಯಾಗ್ ಅಲ್ಲ. ತಪ್ಪಿತಸ್ಥರು ಯಾರೇ ಆಗಿದ್ದರೂ ಸಕಾ೯ರ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.