ಬೆಂಗಳೂರು , ಸೆ 12(DaijiworldNews/PY): ನನ್ನನ್ನು ಮಹಾರಾಷ್ಟ್ರ ಉಸ್ತುವಾರಿಯಿಂದ ಕೈಬಿಟ್ಟಿದ್ದಕ್ಕೆ ನನಗೆ ಬೇಸರವಾಗಿಲ್ಲ. ಎಲ್ಲವೂ ನನಗೆ ದೊರಕಬೇಕು ಎನ್ನುವ ಆಸೆ ಕೂಡ ನನಗಿಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖಗೆ೯ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ನನಗೆ ಬೇಸರವಾಗಿಲ್ಲ. ನನಗೆ ನನ್ನದೇ ಆದ ತತ್ವಾದಶ೯ಗಳಿವೆ ಎಂದಿದ್ದಾರೆ.
ಪಕ್ಷದ ಸಿದ್ದಾಂತವನ್ನು ಅನುಷ್ಠಾನಕ್ಕೆ ತರಲು ಯಾರದರೂ ಸರಿ. ಪ್ರಜಾಪ್ರಭುತ್ವವನ್ನು ಉಳಿಸಬೇಕಾದರೆ ಎಲ್ಲರ ಅಗತ್ಯವೂ ಇದೆ. ನಾನು ಅದೇ ಹಾದಿಯಲ್ಲಿ ಮುನ್ನಡೆದಿದ್ದೇನೆ ಎಂದು ತಿಳಿಸಿದ್ದಾರೆ.
ಸದ್ಯ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಗುಲಾಂ ನಬಿ ಇದ್ದಾರೆ. ನಾನು ಆ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ ಎಂದಿದ್ದಾರೆ.