ನವದೆಹಲಿ, ಸೆ 12(DaijiworldNews/PY): ಅಫ್ಘಾನಿಸ್ತಾನದ ಮಣ್ಣನ್ನು ಯಾವತ್ತೂ ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಬಾರದು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಶನಿವಾರ ದೋಹಾದಲ್ಲಿ ನಡೆದ ಅಫ್ಘಾನಿಸ್ತಾನ ಹಾಗೂ ತೋಲಿಬಾನ್ ನಡೆಸಿದ ಅಫ್ಘನ್ ಶಾಂತಿ ಮಾತುಕತೆಯನ್ನು ಉದ್ದೇಶಿಸಿ ಮಾತಾಡಿದ ಅವರು, ಅಫ್ಘನ್ ಶಾಂತಿ ಸ್ಥಾಪನೆಯ ಕಾಯ೯ದಲ್ಲಿ ಮುಂದಾಳುವಾಗಿರಬೇಕು. ಈ ಮಾನವ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವವನ್ನು ಉತ್ತೇಜಿಸಬೇಕು ಎಂದಿದ್ದಾರೆ.
ಅಫ್ಘಾನಿಸ್ತಾನದ ಮಣ್ಣನ್ನು ಯಾವತ್ತೂ ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಬಾರದು ಎನ್ನುವುದು ನಮ್ಮ ನಿರೀಕ್ಷೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ತಿಳಿಸಿದ ಅವರು, ಇಂದು ಅಫ್ಘನ್ ಶಾಂತಿ ಮಾತುಕತೆಯಲ್ಲಿ ಪಾಲ್ಗೊಂಡು ಮಾತನಾಡಿದೆ. ಶಾಂತಿ ಪ್ರಕ್ರಿಯೆಯು ಅಫ್ಘಾನ್ ನೇತೃತ್ವದಲ್ಲಿ, ಅಫ್ಘಾನ್ ಒಡೆತನದಲ್ಲಿ ನಿಯಂತ್ರಿತವಾಗಿರಬೇಕು. ರಾಷ್ಟ್ರೀಯ ಸಾವ೯ಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು. ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.