ನವದೆಹಲಿ, ಸೆ 12(DaijiworldNews/PY): ತಮಿಳುನಾಡಿನ ಲೋಕಸಭಾ ಸಂಸದ ಎಸ್. ಜಗತ್ ರಕ್ಷಕನ್ ಹಾಗೂ ಅವರ ಕುಟುಂಬದ ಸದಸ್ಯರು ಹೊಂದಿರುವ 89.19 ಕೋಟಿ ರೂ.ಗಳ ಆಸ್ತಿಯನ್ನು ಜಪ್ತಿ ಮಾಡಲು ಶನಿವಾರ ಜಾರಿ ನಿದೇ೯ಶನಾಲಯ ಆದೇಶಿಸಿದೆ.
ಜಗತ್ ರಕ್ಷಕನ್ ಅವರ ಕುಟುಂಬದವರು ವಿದೇಶಿ ವಿನಿಮಯ ಕಾಯ್ದೆಯನ್ನು ಉಲ್ಲಂಘನೆ ಮಾಡಿದ ಕಾರಣ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಜಾರಿ ನಿದೇ೯ಶನಾಲಯ ತಿಳಿಸಿದೆ.
ಜಗತ್ ರಕ್ಷಕನ್ ಅವರ ಪುತ್ರ ಸಂದೀಪ್ ಆನಂದ್ ಅವರು ಸುಮಾರು 70 ಲಕ್ಷ ರೂಪಾಯಿ ಹಾಗೂ 20 ಲಕ್ಷ ರೂಪಾಯಿ ಷೇರನ್ನು ಸಿಂಗಾಪುರ ಮೂಲದ ಸಿಲ್ಲರ್ ಪಾಕ್೯ ಇಂಟರ್ ನ್ಯಾಷನಲ್ ಪ್ರೈವೇಟ್. ಲಿ ಕಂಪೆನಿಯಿಂದ ಪಡೆದುದುಕೊಂಡಿದ್ದು, ಈ ವಿಚಾರ ಫೆಮಾ ಕಾಯ್ದೆಯಡಿ ತನಿಖೆ ನಡೆಸಿದ ಸಂದರ್ಭ ತಿಳಿದುಬಂದಿದೆ ಎಂದು ಇಡಿ ತಿಳಿಸಿದೆ.
ಅನಧಿಕೃತವಾಗಿ ಸ್ವಾಧೀನಪಡಿಸಿಕೊಂಡ ಷೇರುಗಳನ್ನು ಫೆಮಾಗೆ ವಿರುದ್ಧವಾಗಿ ಜಗತ್ರಾಕ್ಷಕನ್ ಅವರ ಕುಟುಂಬ ಸದಸ್ಯರಿಗೆ ವರ್ಗಾಯಿಸಿದ್ದಾರೆ. ಹಾಗಾಗಿ ಇಡಿ ಈ ಕ್ರಮವನ್ನು ಕೈಗೊಂಡಿದೆ. ತನಿಖೆ ಮುಂದುವರಿಯಲಿದೆ ಎಂದು ಹೇಳಿದೆ.