ನವದೆಹಲಿ, ಸೆ 13(DaijiworldNews/PY): ನ್ಯಾಯಾಧೀಶರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗುತ್ತಿದ್ದಾರೆ. ಈ ಟೀಕೆ ಮಾಡುವ ಭರದಲ್ಲಿ ಹಲವಾರು ಗಾಸಿಪ್ ಗಳಿಗೆ ಬಲಿಯಾಗುತ್ತಾರೆ ಎಂದು ಹಿರಿಯ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎನ್ ವಿ ರಮಣ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹೆೇಳಿದ್ದಾರೆ.
ತಮ್ಮ ರಕ್ಷಣೆಯ ಸಲುವಾಗಿ ಮುಕ್ತವಾಗಿ ನ್ಯಾಯಾಧೀಶರು ಮುಕ್ತವಾಗಿ ಮಾತನಾಡುವಾಗ ವೇಳೆ ಸ್ವಯ೦ ನಿರ್ಬಂಧಿಸಿಕೊಳ್ಳುವ ಕಾರಣ ನ್ಯಾಯಾಧೀಶರು ಟೀಕೆಗೆ ಗುರಿಯಾಗುತ್ತಾರೆ ಎಂದು ನ್ಯಾ.ರಮಣ ಹೇಳಿದ್ದಾರೆ.
ನ್ಯಾಯಾಧೀಶರ ಬಗ್ಗೆ ಆಗುವ ಟೀಕೆಗಳು ಹೆಚ್ಚಾಗಲು ಸಾಮಾಜಿಕ ಜಾಲತಾಣಗಳಲ್ಲಿ ಆಗುವ ಅವರ ವಿರುದ್ದದ ಪ್ರಚಾರವೇ ಕಾರಣ.ನ್ಯಾಯಾಧೀಶರ ವಾಕ್ ಸ್ವಾತ೦ತ್ರ್ಯಕ್ಕೆ ಕಾನೂನುಗಳೇ ತಡೆಯು೦ಟು ಮಾಡುತ್ತಿವೆ ಎ೦ದು ಬೊಬ್ಡೆ ಹೇಳಿದ್ದಾರೆ.
ನ್ಯಾಯಾಧೀಶರು ಸ್ವತಂತ್ರರಾಗಲು ತಮ್ಮ ಸಾಮಾಜಿಕ ಜೀವನವನ್ನು ಸಮತೋಲನಗೊಳಿಸಬೇಕು. ಅಂತಹ ಸ್ವಯಂ-ನಿರ್ಬಂಧಗಳನ್ನು ಕಾಯ್ದುಕೊಳ್ಳುವುದು ನ್ಯಾಯಾಧೀಶರ ಮೇಲೆ ಸಂಪೂರ್ಣವಾಗಿ ಇದೆ. ನ್ಯಾಯಾಧೀಶರು ಐಷಾರಾಮಿ ಜೀವನ ಸಾಗಿಸುತ್ತಾರೆ ಎನ್ನುವ ತಪ್ಪು ಕಲ್ಪನೆ ಜನರದ್ದು. ನ್ಯಾಯಾಧೀಶರ ಜೀವನ ಹೂವಿನ ಹಾಸಿಗೆಯಲ್ಲ. ಜನರ ಕಲ್ಪನೆಗಿ೦ತ ಜೀವನ ಭಿನ್ನವಾಗಿರುತ್ತದೆ. ಒ೦ದೇ ಕುಟು೦ಬದ ಉತ್ತಮ ನ್ಯಾಯಾಧೀಶರ ಸ೦ಬ೦ಧಲ್ಲಿ ವ್ಯತ್ಯಾಸ ಇರುತ್ತದೆ ಎ೦ದು ನ್ಯಾ.ರಮಣ ಹೇಳಿದ್ದಾರೆ.