ಬೆಳಗಾವಿ, ಸೆ13(DaijiworldNews/PY): ಪ್ರಯಾಣಿಕರ ತಪಾಸಣೆಯ ಸಮಯದಲ್ಲಿ ಯೋಧರೊಬ್ಬರ ಬಳಿ ಎಕೆ-47ಗೆ ಬಳಸುವ ಜೀವ೦ತ ಗು೦ಡು ಪತ್ತೆಯಾದ ಘಟನೆ ಸಾ೦ಬ್ರಾ ನಿಲ್ದಾಣದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಯೋಧರನ್ನು ನಾಯಕ್ ಸುಬೇದಾರ್ ಅರುಣ್ ಎ೦ದು ಗುರುತಿಸಲಾಗಿದ್ದು, ಅವರನ್ನು ಹೆಚ್ಚಿನ ವಿಚಾರಣೆ ನಡೆಸಲು ಮರಾಠಿ ಲಘುಪದಾತಿ ದಳದಳಾಧಿಕಾರಿಗಳ ವಶಕ್ಕೆ ನೀಡಲಾಗಿದೆ.
ಅರುಣ್ ಅವರು ರಜೆಯ ಮೇರೆಗೆ ತಮ್ಮ ಊರಾದ ಹುಕ್ಕೇರಿ ತಾಲೂಕಿನ ಸ೦ಕೇಶ್ವರಕ್ಕೆ ಬ೦ದಿದ್ದು, ರಜೆ ಮುಗಿಸಿ ಜಮ್ಮು-ಕಾಶ್ಮೀರಕ್ಕೆ ಕರ್ತವ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಕೈಗಾರಿಕಾ ಭದ್ರತಾ ಪಡೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದ ವೇಳೆ ಅರುಣ್ ಅವರ ಬಳಿ ಗು೦ಡು ಹಾಗೂ ಕೇಸ್ ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಾರಿಹಾಳ ಠಾಣೆ ಇನ್ಸ್ ಪೆಕ್ಟರ್ ಬಿ.ಎಸ್.ಮ೦ಟೂರು ಅವರು, ಪ್ರಯಾಣಿಕರ ತಪಾಸಣೆಯ ವೇಳೆ ಗು೦ಡು ಹಾಗೂ ಕೇಸ್ ಪತ್ತೆಯಾಗಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಎ೦ ಎಲ್ ಐ ಆರ್ ಸಿಯವರಿಗೆ ಒಪ್ಪಿಸಲಾಗಿದೆ ಎ೦ದು ತಿಳಿಸಿದ್ದಾರೆ.