ಭದ್ರಾವತಿ, ಸೆ. 13 (DaijiworldNews/MB) : ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ಅವರ ಸಾವಿಗೆ ಯಾರೋ ಆಗದವರು ಕಾರಣವಿರಬಹುದು. ಈ ಸಾವಿನ ಬಗ್ಗೆ ನನಗೆ ಅನುಮಾನವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಒಂದು ಖಾಸಗಿ ಆಸ್ಪತ್ರೆಯಲ್ಲಿ ಜನಪ್ರತಿನಿಧಿಗೆ ವೆಂಟಿಲೇಟರ್ ದೊರೆತಿಲ್ಲ ಎಂದರೆ ಏನು ವಿಷಯ. ಅದು ನಮಗೆ ಅರ್ಥವಾಗ್ತಿಲ್ಲ. ಅಪ್ಪಾಜಿ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು ಎಂದು ಹೇಳುತ್ತಾರೆ. ಆದರೆ ಅವರ ಕುಟುಂಬದ ಯಾರಿಗೂ ಪಾಸಿಟಿವ್ ಆಗಿಲ್ಲ. ಇವೆಲ್ಲವನ್ನು ನೋಡುವಾಗ ಅವರ ಸಾವಿನ ಬಗ್ಗೆ ಅನುಮಾನ ಮೂಡುತ್ತದೆ. ಈ ಬಗ್ಗೆ ಅವರ ಕುಟುಂಬದವರಿಗೂ ಅನುಮಾನವಿದೆ ಎಂದು ಹೇಳಿದ್ದಾರೆ.
ಹಾಗೆಯೇ ಅಪ್ಪಾಜಿಯವರ ಆರೋಗ್ಯದ ಬಗ್ಗೆ ಬೆಳಗ್ಗೆ ಗೊತ್ತಾಗಿದ್ದರೆ ನಾನು ಅವರಿಗೆ ಬೆಂಗಳೂರಿನಲ್ಲೇ ಚಿಕಿತ್ಸೆ ಕೊಡಿಸುತ್ತಿದೆ. ಆದರೆ ನನಗೆ ವಿಷಯ ತಿಳಿಯುವಾಗ ಸಂಜೆಯಾಗಿದೆ. ಆಗ ಚಿಕಿತ್ಸೆಗೆ ಅವರನ್ನು ಬೆಂಗಳೂರಿಗೆ ಕರೆ ತರಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭದ್ರಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡ (67) ಅವರು ಕೊರೊನಾದಿಂದಾಗಿ ಸೆ. ೩ ರಂದು ರಾತ್ರಿ ನಿಧನರಾಗಿದ್ದು ಅವರ ಸಾವಿಗೆ ಸೂಕ್ತ ಸಮಯದಲ್ಲಿ ಬೆಡ್ ಸಿಗದೆ, ವೆಂಟಿಲೇಟರ್ ದೊರೆಯದೆ ಇರುವುದೇ ಕಾರಣವೆಂದು ಹಲವು ನಾಯಕರ ಆರೋಪವಾಗಿದೆ.