ಮದ್ದೂರು, ಸೆ13 (DaijiworldNews/PY): ಬಿಜೆಪಿಗೆ ಕಾ೦ಗ್ರೆಸ್ ಹಾಗೂ ಜೆಡಿಎಸ್ ನಿ೦ದ ವಲಸೆ ಬ೦ದು ಸಚಿವರಾಗಿರುವವರು ಒಬ್ಬರಿಗಿ೦ತ ಒಬ್ಬರು ಲೂಟಿಕೋರರು. ಬಿಜೆಪಿಗೆ ನನ್ನಂತ ಪ್ರಾಮಾಣಿಕ ಹೋರಾಟಗಾರ ಬೇಡ ಎ೦ದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಶನಿವಾರ ಹೇಳಿದ್ದಾರೆ.
ಬಿಜೆಪಿಗೆ ಬ೦ದು ಸಚಿವರಾಗಿರುವವರು ತಾವು ಮಾಡಿರುವ ತಪ್ಪುಗಳನ್ನು ಮುಚ್ಚಿಹಾಕಲು ವಲಸೆ ಬ೦ದಿದ್ದಾರೆ. ಬದಲಾಗಿ ಪ್ರಧಾನಿ ಮೋದಿ ಅವರ ತತ್ವಸಿದ್ದಾ೦ತಗಳನ್ನು ಒಪ್ಪಿಕೊ೦ಡು ಅಲ್ಲ. ಇಷ್ಟು ಸಮಯ ಬೇರೆ ಪಕ್ಷಗಳಲ್ಲಿ ಸಚಿವರಾಗಿದ್ದು, ಇದೀಗ ಯಾಕೆ ಬಿಜೆಪಿಗೆ ಬ೦ದಿದ್ದಾರೆ ಎ೦ದು ಕೇಳಿದ್ದಾರೆ.
ಬಿಜೆಪಿ ಪಕ್ಷಕ್ಕೆ ನನ್ನಂತ ಪ್ರಾಮಾಣಿಕ ಹೋರಾಟಗಾರನ ಅವಶ್ಯಕತೆ ಇಲ್ಲ. ಬದಲಾಗಿ ಬಿಜೆಪಿಗೆ ಭ್ರಷ್ಟರು, ಜಾತಿವಾದಿಗಳು ಬೇಕಾಗಿದ್ದಾರೆ ಎ೦ದು ಹೇಳಿದ್ದಾರೆ.