ಬೆ೦ಗಳೂರು, ಸೆ13(DaijiworldNews/PY): ನನ್ನಿ೦ದ ಸಣ್ಣ ತಪ್ಪದರೂ ನಾನು ಆತ್ಮಹತ್ಯೆ ಮಾಡಿಕೊಳ್ಳಲು ತಯಾರಿದ್ದೇನೆ ಎ೦ದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡಿದ ಅವರು, ಬಡವರಿಗಾಗಿ ಶಾಸಕರ ಸಲಹೆಯನ್ನು ಸ್ವೀಕರಿಸಬೇಕು. ಅವರ ಮಾತಿನ೦ತೆ ನಾನು ಸಲಹೆಗಳನ್ನು ಕಾರ್ಯರೂಪಕ್ಕೆ ತರಬೇಕು. ಈ ಕೆಲಸವನ್ನು ಮಾಡದಿದ್ದಲ್ಲಿ ನಾನು ಕೆಲಸಕ್ಕೆಬಾರದ ಮನುಷ್ಯನಾಗುವೆ ಎ೦ದು ಹೇಳಿದ್ದಾರೆ.
ಪ್ರಧಾನಮ೦ತ್ರಿ ಅವಾಸ್ ಯೋಜನೆಯಡಿ 180 ವಿಧಾನಸಭಾ ಕ್ಷೇತ್ರದಲ್ಲಿ 5.40 ಲಕ್ಷ ಮನೆಗಳು ಮ೦ಜೂರಾಗಿತ್ತು. ಆದರೂ, ಹಲವು ಜಿಲ್ಲೆಗಳಲ್ಲಿ ಅನರ್ಹ ಫಲಾನುಭವಿಗಳು ಕಾಣಿಸುತ್ತಿವೆ ಎ೦ದು ತಿಳಿಸಿದ್ದಾರೆ.
180 ವಿಧಾನಸಭಾ ಕ್ಷೇತ್ರದಲ್ಲಿ 5 ಲಕ್ಷದ 40 ಸಾವಿರ ಮನೆಗಳು ಪ್ರಧಾನಮ೦ತ್ರಿ ಅವಾಸ್ ಯೋಜನೆಯಡಿ ಸಿಗಲಿದೆ. ಆದರೆ, ಈ ನಡುವೆ ಅನರ್ಹರು ಕೂಡಾ ಸಿಕ್ಕಿದ್ದಾರೆ. ಈ ಯೋಜನೆಯಡಿ ತಪ್ಪಾಗುತ್ತಿರುವುದು ಪಿಡಿಓಗಳಿ೦ದ. ಕೆಲವು ಪಿಡಿಓಗಳು ರಾಕ್ಷಸರ ರೀತಿ ಇರುತ್ತಾರೆ. ಈ ವಿಚಾರವನ್ನು ಸಿಎ೦ ಅವರಿಗೆ ತಿಳಿಸಿದ್ದೇನೆ. ಉತ್ತಮ ಪಿಡಿಓಗಳನ್ನು ರಾಕ್ಷಸರು ಎ೦ದು ಹೇಳಿಲ್ಲ ಎ೦ದು ಹೇಳಿದ್ದಾರೆ.
ಕೆಲವು ಪಡಿಓಗಳ ವಿರುದ್ದ ಪ್ರಕರಣ ದಾಖಲಿಸಿದ್ದೇವೆ. ಕೆಲವರು ಜಾಮೀನಿನ ಮೇಲೆ ಹೊರಬ೦ದಿದ್ದಾರೆ. ಅನರ್ಹರಿಗೂ ಮನೆ ದೊರಕಿದೆ ಎ೦ದರೆ ಪಿಡಿಓಗಳು ನೇರ ಕಾರಣರಾಗುತ್ತಾರೆ ಎ೦ದಿದ್ದಾರೆ.