ಜಮ್ಮು, ಸೆ.13(DaijiworldNews/HR): ಜಮ್ಮುವಿನಲ್ಲಿ ಸಿಆರ್ಪಿಎಫ್ ಸಿಬ್ಬಂದಿಯೊಬ್ಬರು ತನ್ನ ಪತ್ನಿಯನ್ನು ಸಾಯಿಸಿ, ಅತ್ತಿಗೆಯನ್ನು ಗಾಯಗೊಳಿಸಿದ ಬಳಿಕ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಇನ್ನು ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡವರನ್ನು ಕಾನ್ಸ್ಟೇಬಲ್ ಮದನ್ ಸಿಂಗ್ ಚಿಬ್ ಎಂದು ಗುರುತಿಸಲಾಗಿದ್ದು, ಸೆಕ್ಟರ್ ಹೆಡ್ ಕ್ವಾರ್ಟರ್ನಲ್ಲಿ ಮೃತದೇಹವನ್ನು ಇಡಲಾಗಿದೆ.
ಮದನ್ ಸಿಂಗ್ ಸ್ವತಃ ಗುಂಡು ಹಾರಿಸಿ ಸಾಯುವ ಮೊದಲು ತನ್ನ ಪತ್ನಿ ಹಾಗೂ ಅತ್ತಿಗೆಯೊಂದಿಗೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ವಾಗ್ವಾದ ನಡೆಸಿದ್ದರು. ಸಿಂಗ್ ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸಿಂಗ್ ಅವರ ಅತ್ತಿಗೆಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ತಿಳಿದು ಬಂದಿದೆ.