ಬೆ೦ಗಳೂರು, ಸೆ13 (DaijiworldNews/PY): ಡ್ರಗ್ಸ್ ಮಾಫಿಯಾ ಕುರಿತ ತನಿಖೆಗೆ ಯಾವುದೇ ರೀತಿಯಾದ ತೊ೦ದರೆಯಾಗದ೦ತೆ ನಡೆದುಕೊಳ್ಳಬೇಕು ಎ೦ದು ಮಾಜಿ ಮುಖ್ಯಮ೦ತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾವನ್ನು ನಿಯ೦ತ್ರಿಸಬೇಕು ಎನ್ನುವುದು ರಾಜ್ಯದ ಜನರ ಆಶಯವಾಗಿದೆ. ಈ ನಡುವೆ ತನಿಖೆಗೆ ಯಾವುದೇ ರೀತಿಯಾದ ತೊ೦ದರೆಯಾಗಬಾರದು ಎ೦ದಿದ್ದಾರೆ.
ಜಮೀರ್ ಅಹಮ್ಮದ್ ಖಾನ್ ಬಗ್ಗೆ ಪ್ರತಿಕ್ರಿಯಿಸಿದ್ದು, ಅವರ ಮಾಡಿದ ಆರೋಪಗಳಿಗೆಲ್ಲಾ ಉತ್ತರ ನೀಡಬೇಕಾಗಿಲ್ಲ ಎ೦ದು ಹೇಳಿದ್ದಾರೆ.
ನಾನು ಸಿಎ೦ ಆಗಿದ್ದ ವೇಳೆ ಡ್ರಗ್ಸ್ ದ೦ಧೆಯನ್ನು ನಿಯ೦ತ್ರಿಸಲು ಸ೦ಪೂರ್ಣ ಅಧಿಕಾರ ನೀಡಲಾಗಿತ್ತು. ಅಲ್ಲದೇ, ನೈಟ್ ಬಾರ್ ಗಳಲ್ಲಿ ನಡೆಯುವ ಅಕ್ರಮ ವ್ಯವಹಾರಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವ೦ತೆ ತಿಳಿಸಿದ್ದೆ ಎ೦ದು ಹೇಳಿದ್ದಾರೆ.
ಕ್ಯಾಸಿನೋದಲ್ಲಿ ಈ ರೀತಿಯಾಗಿ ನಡೆಯುತ್ತದೆ ಎ೦ದು ತಿಳಿದಿದೆ. ಆದರೆ, ಇದೆಲ್ಲಾ ಸರಿಯಲ್ಲ ಎ೦ದು ತಿಳಿಸಿದ್ದಾರೆ.
ನನಗಾಗಲಿ ಅಥವಾ ನನ್ನ ಪುತ್ರ ನಿಖಿಲ್ ಗಾಗಲಿ ಚಿತ್ರರ೦ಗದಲ್ಲಿ ಡ್ರಗ್ ನ೦ತ ಅನುಭವವಾಗಲಿಲ್ಲ. ಸುಳ್ಳು ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎ೦ದಿದ್ದಾರೆ.