ಮುಂಬೈ, ಸೆ.13(DaijiworldNews/HR): ಶಿವಸೇನೆ ಗೂಂಡಾಗಳು ನನ್ನನ್ನು ಬಹಿರಂಗವಾಗಿ ಹತ್ಯೆ ಮಾಡಲು ಮತ್ತು ಅತ್ಯಾಚಾರ ಮಾಡಲು ಬಿಜೆಪಿ ಪಕ್ಷವೂ ಬಿಡಬೇಕೇ ? ಎಂದು ಕಂಗನಾ ರಣಾವತ್, ಸಂಜಯ್ ರಾವತ್ ಗೆ ಪ್ರಶ್ನಿಸಿದ್ದಾರೆ.
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ-ಕಾಶ್ಮೀರಕ್ಕೆ (ಪಿಒಕೆ) ಹೋಲಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್ ಅನ್ನು ಬಿಜೆಪಿ ಪಕ್ಷವೂ ಬೆಂಬಲಿಸುತ್ತಿದೆ, ಇದೊಂದು ದುರದೃಷ್ಟಕರ ಎಂದು ಸಂಜಯ್ ರಾವತ್ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಅಂಕಣದಲ್ಲಿ ಬರೆದುಕೊಂಡಿದ್ದರು.
ಈ ಕುರಿತು ಟ್ವೀಟ್ ನಲ್ಲಿ ಪ್ರತಿಕ್ರಿಯೆ ನೀಡಿದ ಕಂಗನಾ , ಡ್ರಗ್ ಮತ್ತು ಮಾಫಿಯಾ ರಾಕೆಟ್ ಅನ್ನು ಜಗತ್ತಿಗೆ ತೆರೆದಿಟ್ಟ ವ್ಯಕ್ತಿಯನ್ನು ಬಿಜೆಪಿ ಬೆಂಬಲಿಸುತ್ತಿರುವುದು ದುರದೃಷ್ಟಕರ ಎಂದು ವ್ಯಂಗ್ಯಮಾಡಿದ್ದಾರೆ. ಶಿವಸೇನಾ ಗೂಂಡಾಗಳು ನನ್ನನ್ನು ಅತ್ಯಾಚಾರ ಮಾಡಲು, ಬಂಧಿಸಲು ಮತ್ತು ಗಾಯಗೊಳಿಸಲು ಬಿಜಿಪಿ ಪಕ್ಷವೂ ಬಿಡಬೇಕೆ ? ಹೌದೇ ಸಂಜಯ್ (ರಾವತ್) ಜೀ ? ಮಾಫಿಯ ವಿರುದ್ಧ ನಿಂತಿರುವ ಯುವತಿಯನ್ನು ರಕ್ಷಿಸಲು ಅವರಿಗೆಷ್ಟು ಧೈರರ್ಯವಿದೆ ? ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.