ಮೈಸೂರು, ಸೆ 13 (DaijiworldNews/PY): ದಸರಾ ವೇಳೆ ಬನ್ನಿಮಂಟಪದವರೆಗೆ ಜಂಬೂಸವಾರಿ ಮೆರವಣಿಗೆ ಸಾಗದಿದ್ದಲ್ಲಿ ಚಾಮುಂಡೇಶ್ವರಿ ಮೆರವಣಿಗೆಯನ್ನು ಜಟಕಾ ಬಂಡಿಯಲ್ಲಿ ಮಾಡುವುದಾಗಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಹೇಳಿದ್ದಾರೆ.
ದಸರಾವನ್ನು ಸರಳವಾಗಿ ಆಚರಿಸಬೇಕು ಎಂದ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಮೈಸೂರಿನ ಜಯಚಾಮರಾಜ ವೃತ್ತದಲ್ಲಿ ಪ್ರತಿಭಟನೆ ಕೈಗೊಂಡ ಅವರು, ದಸರಾ ಮೈಸೂರು ಅರಮನೆಗೆ ಮಾತ್ರ ಸೀಮಿತವಾಗದೇ, ಜನರ ಹಬ್ಬವಾಗಬೇಕು. ಕೊರೊನಾದ ಮಧ್ಯೆಯೂ ನಾಡಹಬ್ಬದ ವೈಭವಕ್ಕೆ ಯಾವುದೇ ರೀತಿಯಾದ ತೊಂದರೆಯಾಗಕೂಡದು ಎಂದು ತಿಳಿಸಿದರು.
ಸಕಾ೯ರವು ದಸರಾ ಹಬ್ಬದ ವೈಭವಕ್ಕೆ ಯಾವುದೇ ಕೊರತೆ ಮಾಡಕೂಡದು. ಆದರೆ, ಸರಳ ಹಬ್ಬದ ಆಚರಣೆಗೆ 15 ಕೋಟಿ.ರೂ.ಗಳ ಅವಶ್ಯಕತೆ ಏನಿದೆ. ಸ್ಥಳೀಯ ಕಲಾವಿದರ ಮುಖೇನ ವೈಭವದ ಸಾಂಸ್ಕೃತಿಕವಾದ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.