ನವದೆಹಲಿ, ಸೆ.14(DaijiworldNews/HR): 2021ರ ವೇಳೆಗೆ ಕೋವಿಡ್-19ಗೆ ಚುಚ್ಚುಮದ್ದು ಕಂಡುಹಿಡಿಯುವುದಾಗಿ ತಿಳಿಸಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ವರ್ಧನ್, ಇದರ ಬಗ್ಗೆ ಜನರಿಗೆ ಇರುವ ಅನುಮಾನವನ್ನು ಹೋಗಲಾಡಿಸುವ ಯತ್ನ ಮಾಡುತ್ತಿದ್ದು, ಕೋವಿಡ್-19 ನಿರೋಧಕ ಮದ್ದನ್ನು ಮೊದಲಿಗೆ ತಾವೇ ತೆಗೆದುಕೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ.
ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಗಳು ಹಾಗೂ ಈ ಸೋಂಕಿನ ವಿರುದ್ಧ ಹೋರಾಡಲು ಅನ್ವೇಷಿಸುತ್ತಿರುವ ಚುಚ್ಚುಮದ್ದಿನ ಕುರಿತಂತೆ ಅದಾಗಲೇ ಸಾಕಷ್ಟು ಮಂದಿಗೆ ಬಲವಾದ ಅನುಮಾನಗಳು ಹುಟ್ಟಿಕೊಳ್ಳಲಾರಂಭಿಸಿದ್ದು, ತಾವೇ ಮೊದಲಿಗೆ ಕೋವಿಡ್-19 ನಿರೋಧಕ ಮದ್ದನ್ನು ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದ್ದಾರೆ.
ಇನ್ನು ಯಾರಿಗೆ ಮದ್ದಿನ ಅವಶ್ಯಕತೆ ಹೆಚ್ಚಿರುತ್ತದೆಯೋ ಅವರಿಗೆ ಮೊದಲು ಈ ಮದ್ದನ್ನು ಕೊಡಲಾಗುವುದು. ಮದ್ದುಗಳನ್ನು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಂದ್ರ ಮದ್ದು ನಿಯಂತ್ರಣ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಸಹ ಹರ್ಷ್ವರ್ಧನ್ ಇದೇ ವೇಳೆ ತಿಳಿಸಿದ್ದಾರೆ.