ಉತ್ತರ ಪ್ರದೇಶ,ಸೆ.14(DaijiworldNews/HR): ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಮೂರು ವರ್ಷದ ಮಗಳನ್ನು ನೆಲದ ಮೇಲೆ ಎಸೆದು ಹತ್ಯೆ ಮಾಡಿ, ಹೆಂಡತಿಯನ್ನು ಮನಸ್ಸಿಗೆ ಬಂದಂತೆ ಥಳಿಸಿದ ಘಟನೆ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿರುವ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಕುಡುಕ ಅಮಿತ್ ತನ್ನ ಹೆಂಡತಿಯೊಂದಿಗೆ ಜಗಳವಾಡಿ ಬಳಿಕ ಹೆಣ್ಣು ಮಗುವಿನ ಹತ್ಯೆ ಮಾಡಿದ್ದಾನೆ. ಆತ ಪ್ರತಿದಿನ ಮದ್ಯದ ವಿಷ್ಯಕ್ಕೆ ಜಗಳ ಮಾಡ್ತಿದ್ದ ಎನ್ನಲಾಗಿದೆ.
ಅಮಿತ್ ಪತ್ನಿ ರೇಣು ಜೊತೆ ಗಲಾಟೆ ಮಾಡಿಕೊಂಡ ಬಳಿಕ ಮೂರು ವರ್ಷದ ಮಗುವನ್ನು ನೆಲಕ್ಕೆ ಎಸೆದು ಹತ್ಯೆ ಮಾಡಿದ್ದಾನೆ. ನಂತರ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಹೆಂಡತಿ ಪ್ರಜ್ಞೆ ತಪ್ಪುತ್ತಿದ್ದಂತೆ ಪತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.