ನವದೆಹಲಿ, ಸೆ.14(DaijiworldNews/HR): ಸಂಸತ್ತಿನಲ್ಲಿ ಮುಂಗಾರಿನ ಅಧಿವೇಶನ ಪ್ರಾರಂಭಗೊಂಡಿದ್ದು ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ಕಿಡಿ ಕಾರುತ್ತಿದ್ದು, ಚೀನಾದೊಂದಿಗಿನ ಮಾತುಕತೆ ಕುರಿತು ಸರ್ಕಾರ ಎಂದಿಗೂ ಪ್ರತಿಪಕ್ಷಗಳಿಗೆ ವರದಿ ನೀಡಿಲ್ಲ ಎಂಬುದಾಗಿ ಕಾಂಗ್ರೆಸ್ ಪಕ್ಷದ ಮುಖಂಡ ಶಶಿ ತರೂರ್ ಹೇಳಿದ್ದಾರೆ.
ಈ ಬಗ್ಗೆ ಸಂಸತ್ ಆವರಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, ಸರ್ಕಾರವು ಸಂಸತ್ತಿಗೆ ಜವಾಬ್ದಾರನಾಗಿರುತ್ತದೆ. ಆದರೆ, ಚೀನಾ ಮತ್ತು ಭಾರತ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ಮಂತ್ರಿಗಳ ನಡುವಿನ ಮಾತುಕತೆ ಕುರಿತು ನಮಗೆ ಯಾವುದೇ ವರದಿ ನೀಡಿಲ್ಲ ಎಂದು ಹೇಳಿದ್ದಾರೆ.
ಇನ್ನು ಚರ್ಚೆಗೆ ಮೀರಿದ ಮಿಲಿಟರಿಗೆ ಬೆಂಬಲ ನೀಡುವ ಪ್ರಶ್ನೆಗೆ, ನಾವು ನಮ್ಮ ಸೈನ್ಯದೊಂದಿಗೆ ಬಹಳ ಗಟ್ಟಿಯಾಗಿ ನಿಲ್ಲುತ್ತೇವೆ ಎಂದು ಶಶಿ ತರೂರ್ ಹೇಳಿದ್ದಾರೆ.