ಬೆಳಗಾವಿ, ಸೆ. 14 (DaijiworldNews/MB) : ಡ್ರಗ್ಸ್ ನಶೆ ಸ್ಯಾಂಡಲ್ವುಡ್, ಟಾಲಿವುಡ್, ಬಾಲಿವುಡ್ ಸೇರಿದಂತೆ ಎಲ್ಲಾ ವುಡ್ಗಳಲ್ಲೂ ಇದೆ ಎಂದು ಚಲನಚಿತ್ರ ನಟರೂ ಆಗಿರುವ ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.
ಸೋಮವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾದಕ ವ್ಯಸನಿಗಳು ತಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡಬೇಕು ಎಂದು ಹೇಳಿದ ಅವರು, ಈ ಡ್ರಗ್ಸ್ ದಂಧೆ ನಡೆಸುವ ಕಿಂಗ್ಪಿನ್ಗಳು, ಗಂಡಸರಾಗಲಿ, ಹೆಂಗಸರಾಗಲಿ, ರಾಜಕಾರಣಿಗಳ ಮಕ್ಕಳೇ ಆದರೂ ನಾವು ಬಿಡುವುದಿಲ್ಲ. ಈಗಾಗಲೇ ತನಿಖೆ ನಡೆಯುತ್ತಿದ್ದು ಈ ದಂಧೆಯನ್ನು ಮಟ್ಟ ಹಾಕುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಬಿಜೆಪಿಯ ಕೆಲವು ನಾಯಕರು ಅಫೀಮು ತೆಗೆದುಕೊಳ್ಳುತ್ತಾರೆ ಎಂಬ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹರಿಪ್ರಸಾದ್ ಹೇಳಿದ್ದು ಎಲ್ಲವೂ ಕೂಡಾ ವೇದ ವಾಕ್ಯವಲ್ಲ. ಅವರು ಬ್ರಹ್ಮನೇನಲ್ಲ. ಅಷ್ಟಕ್ಕೂ ಬಿಜೆಪಿ ನಾಯಕರು ಅಫೀಮು ಸೇವಿಸುವುದನ್ನು ಅವರು ಯಾವಾಗ ನೋಡಿದ್ದು ? ಆಗಲೇ ಹೇಳದೆ ಈವರೆಗೂ ಸುಮ್ಮನಿದ್ದದ್ದು ಯಾಕೆ? ಎಂದು ಪ್ರಶ್ನಿಸಿದರು.
ಹಾಗೆಯೇ ಆರ್ಎಸ್ಎಸ್ ರೀತಿ ನಮ್ಮ ಶತ್ರುಗಳನ್ನೂ ತಯಾರಿಸುವುದಿಲ್ಲ ಎಂಬ ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹಾಗಾದರೆ ಎಸ್ಡಿಪಿಐ ರೀತಿ ಮಾಡುತ್ತಾರಂತಾ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದು ಬೆಂಗಳೂರಿನ ಕೆ.ಜೆ. ಹಳ್ಳಿ, ಡಿ.ಜೆ. ಹಳ್ಳಿಯಲ್ಲಿ ಗಲಾಟೆ ಮಾಡಿದವರ್ಯಾರು. ಅವರೇ ಶತ್ರುಗಳನ್ನು ತಯಾರಿಸುವವರು. ಅವರಲ್ಲೇ ಹೆಚ್ಚು ದೇಶದ್ರೋಹಿಗಳು ಇರುವುದು ಎಂದು ಆಕ್ರೋಶಗೊಂಡರು.